Advertisement

ಕೋವಿಶೀಲ್ಡ್ ಲಸಿಕೆ ಬೆಲೆ :  ಖಾಸಗಿ ಆಸ್ಪತ್ರೆಗಳಿಗೆ 600 ರೂ, ಸರ್ಕಾರಕ್ಕೆ 400 ರೂ : ಸೀರಂ

01:54 PM Apr 21, 2021 | Team Udayavani |

ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನ ನಿತ್ಯ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಕೋವಿಡ್ ಲಸಿಕೆಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಮೇ. 1 ರಿಂದ 18 ವರ್ಷ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆಯನ್ನು ನೀಡಲಾಗುತ್ತದೆ ಎಂದು ಘೋಷಿಸಿದೆ.

Advertisement

ಈ ಹಿನ್ನೆಲೆಯಲ್ಲಿ ವಿಶ್ವದ ಅತ್ಯಂತ ದೊಡ್ಡ ಲಸಿಕಾ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಾನು ಉತ್ಪಾದಿಸಿ ಕೊಡುತ್ತಿರುವ ಲಸಿಕೆಯ ಡೋಸ್ ಗೆ ದರ ನಿಗದಿಗೊಳಿಸಿ ಘೋಷಿಸಿದೆ.

ಓದಿ : ರಾಮ,ಕೃಷ್ಣ,ಹನುಮಂತನ ವೇಷ ಧರಿಸಿ ಮಾಸ್ಕ್ ವಿತರಿಸಿದ ಹೋಟೆಲ್ ನೌಕರರು

ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್ ಗೆ 600 ರೂ ಗಳಂತೆ ಹಾಗೂ ಸರ್ಕಾರಕ್ಕೆ ಪ್ರತಿ ಡೋಸ್ ಲಸಿಕೆಗೆ 400 ರೂ ಗಳಂತೆ ನೀಡಲಿದೆ ಎಂದು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ  ಘೋಷಣೆ ಮಾಡಿದೆ.


ಇನ್ನು ಈ ಕುರಿತಾಗಿ ತನ್ನ ಅಧಿಕೃತ ಟ್ವೀಟರ್ ನಲ್ಲಿ ಮಾಹಿತಿ ನೀಡಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ,ಮುಂದಿನ ಎರಡು ತಿಂಗಳುಗಳಲ್ಲಿ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಸೀಮಿತ ಸಾಮರ್ಥ್ಯವನ್ನು ಪರಿಹರಿಸುವುದಾಗಿ ಸಂಸ್ಥೆ ಮಾಹಿತಿ ತಿಳಿಸಿದೆ.

Advertisement

” ನಮ್ಮ ಸಾಮರ್ಥ್ಯದ 50 ಪ್ರತಿಶತವನ್ನು ಭಾರತ ಸರ್ಕಾರದ ಲಸಿಕೆ ಅಭಿಯಾನಕ್ಕೆ ನೀಡಲಾಗುವುದು, ಮತ್ತು ಉಳಿದ 50 ಪ್ರತಿಶತದಷ್ಟು ಸಾಮರ್ಥ್ಯವು ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ನೀಡಲು ಸಂಸ್ಥೆ ನಿರ್ಧರಿಸಿದೆ” ಎಂದಿದೆ.

ಕೋವಿಶೀಲ್ಡ್ ಲಸಿಕೆ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸೇಜ್‌ ಗೆ 600 ರೂ. ನಂತೆ ನೀಡಲು ಸೀರಂ ಸುದ್ದಿ ಸಂಸ್ಥೆ ಪಿಟಿಐ ಗೆ ಮಾಹಿತಿ ನೀಡಿದೆ.

ಓದಿ : ಸೋತು ಕಂಗೆಟ್ಟವರ ಕದನ: ಪಂಜಾಬ್ ವಿರುದ್ಧವಾದರೂ ಗೆಲುವಿನ ಖಾತೆ ತೆರೆದೀತೇ ಹೈದರಾಬಾದ್‌?

Advertisement

Udayavani is now on Telegram. Click here to join our channel and stay updated with the latest news.

Next