ಪುಣೆ: ದೇಶದ ಜನರಿಗೆ ಕೋವಿಡ್ ಲಸಿಕೆ ನೀಡುವ ಮೊದಲ ಹಂತ ಆರಂಭವಾಗಿದೆ. ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೋವಿಶೀಲ್ಡ್ ಲಸಿಕೆಯನ್ನು ಹೊಂದಿರುವ ಮೂರು ಕಂಟೈನರ್ ಗಳು ಹೊರಟಿದೆ.
ತಾಪಮಾನ ನಿಯಂತ್ರಿತ ಮೂರು ಟ್ರಕ್ ಗಳಲ್ಲಿ ಕೋವಿಶೀಲ್ಡ್ ಲಸಿಕೆಗಳು ಹೊರಟಿದೆ. ಪುಣೆ ವಿಮಾನ ನಿಲ್ದಾಣದಿಂದ ಭಾರತದ 13 ಪ್ರಮುಖ ನಗರಗಳಿಗೆ ಸರಬರಾಜಾಗಲಿದೆ.
ದೆಹಲಿ, ಅಹಮದಾಬಾದ್, ಕೋಲ್ಕತಾ, ಚೆನ್ನೈ, ಬೆಂಗಳೂರು, ಕರ್ನೂಲ್, ಹೈದರಾಬಾದ್, ವಿಜಯವಾಡ, ಗುವಾಹಟಿ, ಲಖನೌ, ಚಂಡೀಗಢ ಮತ್ತು ಭುವನೇಶ್ವರ ಸೇರಿದಂತೆ 13 ಸ್ಥಳಗಳಿಗೆ ತಲುಪಲಿವೆ.
ಟ್ರಕ್‌ಗಳು ಲಸಿಕೆಗಳ 478 ಪೆಟ್ಟಿಗೆಗಳನ್ನು ಹೊತ್ತೊಯ್ದಿದ್ದು, ಪ್ರತಿ ಪೆಟ್ಟಿಗೆಯ ತೂಕ 32 ಕೆ.ಜಿ. ಇದೆ. ಬೆಳಗ್ಗೆ 10ರೊಳಗೆ ಸರಕುಗಳನ್ನು ಈ ಸ್ಥಳಗಳಿಗೆ ರವಾನೆಯಾಗಲಿದೆ.
ಇದನ್ನೂ ಓದಿ:ರಾಜಕಾರಣಿಗಳಿಗೆ ಇಲ್ಲ ಮೊದಲ ಲಸಿಕೆ
ಒಟ್ಟು ಎಂಟು ವಿಮಾನಗಳು, ಎರಡು ಸರಕು ವಿಮಾನಗಳು ಮತ್ತು ಇತರ ನಿಯಮಿತ ವಾಣಿಜ್ಯ ವಿಮಾನಗಳು ಲಸಿಕೆಗಳನ್ನು ಸಾಗಿಸುತ್ತವೆ.