ಲಂಡನ್ : ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 300 ಮಿಲಿಯನ್ ಡಾಲರ್ ಹೂಡಿಕೆಯನ್ನು ಬ್ರಿಟನ್ ನಲ್ಲಿ ಮಾಡಲಿದೆ ಎಂಬ ಮಾಹಿತಿಯನ್ನು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಲಸಿಕೆ ಉತ್ಪಾದನೆ, ಪ್ರಯೋಗ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಸೀರಂ ಈ ಹೂಡಿಕೆಯನ್ನು ಮಾಡಲಿದೆ.
ಇದನ್ನೂ ಓದಿ : ಉಡುಪಿ: ಮೆಡಿಕಲ್ ಶಾಪ್ ಬಂದ್ ಮಾಡುವ ವೇಳೆಯಲ್ಲಿ ಬಂದ ಗ್ರಾಹಕರಿಂದ ಮಾಲಕನ ಮೇಲೆ ಹಲ್ಲೆ
240 ಮಿಲಿಯನ್ ಪೌಂಡ್ ಯೋಜನೆಯು ಮಾರಾಟ ಕಚೇರಿ, ‘ಕ್ಲಿನಿಕಲ್ ಪ್ರಯೋಗಗಳು, ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಲಸಿಕೆಗಳ ತಯಾರಿಕೆ’ ಯನ್ನು ಒಳಗೊಂಡಿರುತ್ತದೆ ಎಂದು ಜಾನ್ಸನ್ ಡೌನಿಂಗ್ ಸ್ಟ್ರೀಟ್ ಕಚೇರಿ ತಿಳಿಸಿದೆ.
ಕಡಿಮೆ ಬೆಲೆಯ ಅಸ್ಟ್ರಾಜೆನೆಕಾ ಕೊವಿಡ್ ಲಸಿಕೆ ಉತ್ಪಾದಿಸುವಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಯಾಗಿದೆ. ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯ ಮೊದಲ ಹಂತದ ಪ್ರಯೋಗಗಳನ್ನು ಮಾಡಲು ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮುಂದಾಗಿದೆ.
ಇನ್ನು, ಬ್ರಿಟನ್ ಪ್ರವಾಸದಲ್ಲಿರುವ ಸೀರಮ್ ಸಂಸ್ಧೆ ಸಿಇಒ ಆದಾರ್ ಪೂನಾವಾಲಾ ಅಲ್ಲಿ ಹೂಡಿಕೆಯ ಬಗ್ಗೆ ಸರ್ಕಾರ ಹಾಗೂ ಖಾಸಗಿ ಕಂಪೆನಿಗಳ ಜತೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳು ತಿಳಿಸಿವೆ.
ಇದನ್ನೂ ಓದಿ : ಗೋವಾ: ಕೋವಿಡ್ ವಾರ್ಡ್ ಗೆ ತೆರಳಿ ರೋಗಿಗಳ ಕುಂದುಕೊರತೆಯನ್ನು ಆಲಿಸಿದ ಮುಖ್ಯಮಂತ್ರಿ