Advertisement

D.K.Shivakumar ಗಂಭೀರ ಆರೋಪ; ಸರಕಾರದ ವಿರುದ್ಧ ಯಾಗ: ಏನಿದು ಶತ್ರು ಭೈರವಿ?

01:37 AM May 31, 2024 | Team Udayavani |

ಬೆಂಗಳೂರು: ಸರಕಾರದ ವಿರುದ್ಧ ಕೇರಳದಲ್ಲಿ ಶತ್ರುಭೈರವಿ ಯಾಗ ನಡೆಯು ತ್ತಿದ್ದು, ಅಘೋರಿಗಳ ಮೂಲಕ ಈ ಕಾರ್ಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಪಂಚಬಲಿ ನೀಡ ಲಾಗುತ್ತಿದೆ ಎಂದು ಡಿಸಿಎಂ ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಗುರುವಾರ ಸುದ್ದಿ ಗಾರರೊಂದಿಗೆ ಮಾತನಾಡಿ, ನನ್ನ ಹಾಗೂ ಸಿಎಂ ವಿರುದ್ಧ ಕೇರಳದಲ್ಲಿ ತಂತ್ರಿಗಳನ್ನು ಬಳಸಿ ಈ ಕಾರ್ಯ ಮಾಡಲಾಗುತ್ತಿದ್ದು, ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳ ಬಲಿ ಮೂಲಕ ಈ ಮಾಂತ್ರಿಕ ಯಾಗ ನಡೆಯುತ್ತಿದೆ ಎಂದರು.

ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ ರಾಜಕಂಟಕ, ಮಾರಣ ಮೋಹನ ಸ್ತಂಭನ ಯಾಗ ಪ್ರಯೋಗ ನಡೆಸ ಲಾಗುತ್ತಿದೆ. ಯಾರು ಇದನ್ನು ಮಾಡಿಸುತ್ತಿದ್ದಾರೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಶಕ್ತಿ, ದೇವರು ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಏನಿದು ಶತ್ರು ಭೈರವಿ ಯಾಗ?
ಶಾಕ್ತ ಪದ್ಧತಿಯ ದೇವಿ ಆರಾಧ ನೆಯ ದಶ ಮಹಾ ವಿದ್ಯೆಯಲ್ಲಿ ಭೈರವಿ ಸ್ವರೂಪದ ಆರಾಧನೆಯನ್ನು ಅತ್ಯಂತ ತಾಮಸ ವಿಧಾನ ಎಂದು ಪರಿಗಣಿಸಲಾಗಿದೆ. ಭೈರವಿ ಪದ್ಧತಿಯಲ್ಲಿ ಶ್ಮಶಾನ ಭೈರವಿ, ರುಂಡ ಭೈರವಿ, ಶತ್ರು ಭೈರವಿ ಎಂಬಿತ್ಯಾದಿ ಸ್ತರಗಳಿವೆ. ವಿಧ್ವಂಸಕ ಉದ್ದೇಶದಿಂದ ಈ ಪ್ರಯೋಗ ಮಾಡಲಾಗುತ್ತದೆ. ಉಪಾಸನೆಯ ಕ್ರಮ ಸರಿಯಾಗದೆ ಇದ್ದರೆ ಮಾಡಿಸಿದವನಿಗೂ, ಮಾಡಿದವನಿಗೂ ಅಪಾಯವಂತೆ.

Advertisement

Udayavani is now on Telegram. Click here to join our channel and stay updated with the latest news.

Next