Advertisement
ಗುಪ್ತದಳ, ಆಂತರಿಕ ಭದ್ರತಾ ವಿಭಾಗ ಹಾಗೂ ವಿಶೇಷ ದಳ ಕೂಡ ಜಿಲ್ಲೆಯ ಮೇಲೆ ನಿಗಾ ಇಟ್ಟಿವೆ. ಜಿಲ್ಲೆಯ ಜನಜಂಗುಳಿ ಪ್ರದೇಶಗಳು, ಪ್ರವಾಸಿ ತಾಣಗಳು, ಬಸ್ ನಿಲ್ದಾಣಗಳು, ದೇವಾಲಯ, ಮಸೀದಿ, ಚರ್ಚ್‌ಗಳ ಬಳಿಯೂ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಜಂಟಿಯಾಗಿ ತಪಾಸಣೆ ನಡೆಸುತ್ತಿವೆ.ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿಯಲ್ಲಿ ಹೆಚ್ಚಿನ ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ.
**
60 ಕೇರಳೀಯರ ಮೇಲೆ ನಿಗಾ
ಕಾಸರಗೋಡು: ಶ್ರೀಲಂಕಾದಲ್ಲಿ ಎ. 21ರಂದು ನಡೆದ ಸರಣಿ ಬಾಂಬ್ ಸ್ಫೋಟ ಮತ್ತು ಐಸಿಸ್‌ಗೆ ಸೇರ್ಪಡೆಗೊಳ್ಳಲು ಕೇರಳದ ಕೆಲವರು ವಿದೇಶಕ್ಕೆ ತೆರಳಿರುವ ಪ್ರಕರಣಕ್ಕೆ ಸಂಬಂಧಿಸಿ 60ರಷ್ಟು ಕೇರಳೀಯರ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಿಗಾ ಇರಿಸಿದೆ.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಎನ್‌ಐಎ ತನಿಖೆ ನಡೆಸುತ್ತಿದೆ. ಶ್ರೀಲಂಕಾ ಸ್ಫೋಟದ ಸೂತ್ರಧಾರ ಝಹ್ರಾನ್ ಹಶೀಮ್ ಕೇರಳ ಮತ್ತು
ತಮಿಳುನಾಡಿಗೆ ಪದೇ ಪದೆ ಬಂದಿದ್ದನೆಂಬ ಮಾಹಿತಿ ಪಡೆದುಕೊಂಡಿರುವ ಎನ್‌ಐಎ ಆತ ಯಾರನ್ನು ಭೇಟಿಯಾಗಿದ್ದ ಮತ್ತು ಯಾಕಾಗಿ ಬಂದಿದ್ದ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಈತ ಪ್ರಚೋದನಕಾರಿಯಾಗಿ ಧಾರ್ಮಿಕ ಪ್ರವಚನ ನೀಡಿದ್ದ ನೆಂಬ ಮಾಹಿತಿ ಲಭಿಸಿದೆ. ಅಲ್ಲದೆ ಆತ ಕೇರಳದ ಹಲವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
Related Articles
ಮಲಪ್ಪುರಂ ವಂಡೂರಿನಲ್ಲಿ ಕೆಲವು ದಿನಗಳ ಹಿಂದೆ ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್(ಐಸಿಸ್)ನೊಂದಿಗೆ ನಂಟು
ಹೊಂದಿರುವುದಾಗಿ ಶಂಕಿಸಲಾಗುತ್ತಿರುವ ತಂಡವೊಂದು ರಹಸ್ಯ ಸಭೆ
ನಡೆಸಿತ್ತು. ಈ ಸಂಬಂಧ ಕೋಯಿಕ್ಕೋಡ್ ತಾಮರಶೆÏàರಿ ನಿವಾಸಿ ಶೈಬು ನಿಹಾರ್‌ನನ್ನು ವಶಕ್ಕೆ ತೆಗೆದುಕೊಂಡು ಎನ್‌ಐಎ ವಿಚಾರಣೆ ನಡೆಸಿತ್ತು. ಆತ ಕಾಸರಗೋಡಿನ ಹಲವರೊಂದಿಗೆ ನಂಟು ಇರುವ ಬಗ್ಗೆ ತಿಳಿಸಿದ್ದ. ಈ ಆಧಾರದಲ್ಲಿ 2 ಮನೆಗಳಿಗೆ ಎನ್‌ಐಎ ದಾಳಿ ನಡೆಸಿ ದಾಖಲೆ ವಶಪಡಿಸಿತ್ತು.
Advertisement