Advertisement

ಕೊಟ್ಟಿಗೆಹಾರದಲ್ಲಿ ಸರಣಿ ಕಳ್ಳತನ : ಲಕ್ಷಾಂತರ ರೂ. ಬೆಲೆ ಬಾಳುವ ವಸ್ತು, ನಗದು ಕಳವು

12:40 PM Mar 08, 2022 | Team Udayavani |

ಕೊಟ್ಟಿಗೆಹಾರ : ನಗರದ ಕೆಲವೆಡೆ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದು ಶಾಲೆ, ಅಂಗಡಿ, ಗ್ಯಾರೇಜ್ ಸೇರಿ ಸರಣಿ ಕಳ್ಳತನ ನಡೆಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ದೋಚಿದ ಘಟನೆ ನಡೆದಿದೆ.

Advertisement

ಶಾಲೆಯ ಹೆಂಚು ತೆಗೆದು ಒಳ ಪ್ರವೇಶಿಸಿದ ಕಳ್ಳರು ಕಪಾಟುಗಳ ಬಾಗಿಲು ಮುರಿದು ಸೊತ್ತುಗಳನ್ನು ಜಾಲಾಡಿ ಪ್ರೊಜೆಕ್ಟರ್, ನಗದು ಸೇರಿ ಹಲವು ವಸ್ತುಗಳನ್ನು ಕಳವು ಮಾಡಿದ್ದಾರೆ, ಅದೇ ರೀತಿ ಕೋಳಿ ಅಂಗಡಿಯಲ್ಲಿಯೂ ನಾಲ್ಕು ಸಾವಿರ ರೂ. ನಗದು ದೋಚಿದ್ದಾರೆ.

ಘಟನೆ ಕುರಿತು ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿದ್ದು ಜೊತೆಗೆ ಶ್ವಾನ ದಳ ಆಗಮಿಸಿ ಪರಿಶೀಲನೆಯನ್ನು ನಡೆಸಿ ಕಳ್ಳರ ಹೆಡೆಮುರಿ ಕಟ್ಟಲು ಬಲೆಬೀಸಿದ್ದಾರೆ.

ಇದನ್ನೂ ಓದಿ :  ಮಹಿಳಾ ದಿನದಂದೇ ಮಹಿಳಾ ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು !

Advertisement

Udayavani is now on Telegram. Click here to join our channel and stay updated with the latest news.

Next