Advertisement

ಸೆರೆನಾ-ವೋಜ್ನಿಯಾಕಿ ಜೋಡಿ ಸೆಮಿಫೈನಲಿಗೆ

10:27 AM Jan 09, 2020 | Team Udayavani |

ಆಕ್ಲೆಂಡ್‌: ಸೆರೆನಾ ವಿಲಿಯಮ್ಸ್‌-ಕ್ಯಾರೋಲಿನಾ ವೋಜ್ನಿಯಾಕಿ “ಆಕ್ಲೆಂಡ್‌ ಎಸಿಬಿ ಕ್ಲಾಸಿಕ್‌ ಟೆನಿಸ್‌ ಪಂದ್ಯಾವಳಿ’ಯ ವನಿತಾ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

ಬುಧವಾರದ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯಲ್ಲಿ ಇವರು ಅಗ್ರ ಶ್ರೇಯಾಂಕದ ಜೋಹಾನ್ನಾ ಲಾರ್ಸೆನ್‌ (ಸ್ವೀಡನ್‌)-ಕ್ಯಾರೋಲಿನ್‌ ಡೋಲ್‌ಹೈಡ್‌ (ಅಮೆರಿಕ) ವಿರುದ್ಧ 6-2, 6-1 ಅಂಕಗಳ ಸುಲಭ ಜಯ ಸಾಧಿಸಿದರು.

ವನಿತಾ ಸಿಂಗಲ್ಸ್‌ನಲ್ಲಿ ಯುಗೇನಿ ಬೌಶಾರ್ಡ್‌ ಸೆಮಿಫೈನಲ್‌ ತಲುಪಿದ್ದಾರೆ. ಅವರು ಕ್ಯಾರೋಲಿನಾ ಗಾರ್ಸಿಯಾ ವಿರುದ್ಧ 6-4, 6-4ರಿಂದ ಗೆದ್ದು ಬಂದರು. ಫ್ರಾನ್ಸ್‌ನ ಅಲಿಜೆ ಕಾರ್ನೆಟ್‌ 3-6, 6-4, 6-4ರಿಂದ ಪೆಟ್ರಾ ಮಾರ್ಸಿಕ್‌ಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next