Advertisement

ಪಾರ್ಮಾ ಡಬ್ಲ್ಯುಟಿಎ ಪಂದ್ಯಾವಳಿ : ದ್ವಿತೀಯ ಸುತ್ತಿನಲ್ಲಿ ಎಡವಿದ ಸೆರೆನಾ

12:45 AM May 20, 2021 | Team Udayavani |

ಪಾರ್ಮಾ (ಇಟಲಿ) : ಸೆರೆನಾ ವಿಲಿಯಮ್ಸ್‌ ಅವರ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ತಯಾರಿಗೆ ಮತ್ತೂಂದು ಹಿನ್ನಡೆಯಾಗಿದೆ.

Advertisement

ಇಲ್ಲಿ ನಡೆಯುತ್ತಿರುವ ಪಾರ್ಮಾ ಡಬ್ಲ್ಯುಟಿಎ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲೇ ಅವರು ಸೋತು ಹೊರಬಿದ್ದರು.

ಅಗ್ರ ಶ್ರೇಯಾಂಕದ ಸೆರೆನಾ ಅವರನ್ನು ಜೆಕ್‌ ಆಟಗಾರ್ತಿ ಕ್ಯಾಥರಿನಾ ಸಿನಿಯಕೋವಾ 7-6 (7-4), 6-2 ಅಂತರದಿಂದ ಪರಾಭವಗೊಳಿಸಿ ಕ್ವಾರ್ಟರ್‌ ಫೈನಲ್‌ ತಲುಪಿದರು. ಸಿನಿಯಕೋವಾ ಅವರಿನ್ನು ಫ್ರಾನ್ಸ್‌ನ ಕ್ಯಾರೋಲಿನಾ ಗಾರ್ಸಿಯಾ ವಿರುದ್ಧ ಆಡಲಿದ್ದಾರೆ.

ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ರಶ್ಯದ ದರಿಯಾ ಕಸತ್ಕಿನಾ ಅವರನ್ನು 1-6, 6-4, 7-5ರಿಂದ ಹಿಮ್ಮೆಟ್ಟಿಸಿ ಕ್ವಾ. ಫೈನಲ್‌ಗೆ ಏರಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಕೊಕೊ ಗಾಫ್ ಎಸ್ತೋನಿಯಾದ ಕಯಾ ಕನೆಪಿ ವಿರುದ್ಧ 7-6 (8-6), 7-6 9-(7) ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next