Advertisement

ವಿಂಬಲ್ಡನ್‌ ಸಿಂಗಲ್ಸ್‌ ಪ್ರವೇಶ ಪಟ್ಟಿ: ಸೆರೆನಾ, ವೀನಸ್‌ ವಿಲಿಯಮ್ಸ್‌ ಹೆಸರು ಇಲ್ಲ

11:09 PM Jun 04, 2022 | Team Udayavani |

ವಿಂಬಲ್ಡನ್‌: ವಿಂಬಲ್ಡನ್‌ ಬಿಡುಗಡೆ ಮಾಡಿದ ವನಿತೆಯರ ಸಿಂಗಲ್ಸ್‌ ಪ್ರವೇಶ ಪಟ್ಟಿಯಲ್ಲಿ ಖ್ಯಾತ ಟೆನಿಸ್‌ ತಾರೆಯರಾದ ಸೆರೆನಾ ಮತ್ತು ವೀನಸ್‌ ವಿಲಿಯಮ್ಸ್‌ ಅವರ ಹೆಸರು ಇಲ್ಲ.

Advertisement

ಜೂ. 27ರಂದು ಆರಂಭವಾಗುವ ಈ ಗ್ರ್ಯಾನ್‌ ಸ್ಲಾಮ್‌ ಕೂಟಕ್ಕೆ ಇವರಿಬ್ಬರು ಇನ್ನು ವೈಲ್ಡ್‌ ಕಾರ್ಡ್‌ ಆಹ್ವಾನಕ್ಕೆ ಮನವಿ ಮಾಡಬೇಕಾಗಿದೆ.

ಆಲ್‌ ಇಂಗ್ಲೆಂಡ್‌ ಕ್ಲಬ್‌ನಲ್ಲಿ ಸೆರೆನಾ ಅವರು ಏಳು ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

2016ರಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದಿದ್ದರು. ಒಟ್ಟಾರೆ ಅವರು ದಾಖಲೆ 23 ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಪ್ರಶಸ್ತಿ ಜಯಿಸಿದ್ದಾರೆ. 40ರ ಹರೆಯದ ಸೆರೆನಾ 2018 ಮತ್ತು 2019ರಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿದ್ದರು.

2021ರ ಯುಎಸ್‌ ಓಪನ್‌ ರನ್ನರ್‌ ಅಪ್‌ ಆಗಿದ್ದ ಲೇಲಾ ಫೆರ್ನಾಂಡೆಸ್‌ ಅವರ ಹೆಸರು ಕೂಡ ಪ್ರವೇಶಪಟ್ಟಿಯಲ್ಲಿ ಇಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next