Advertisement

ಕರ್ಫ್ಯೂ ಉಲ್ಲಂಘಿಸಿದ ಫುಟ್ ಬಾಲ್ ಆಟಗಾರನಿಗೆ ಮೂರು ತಿಂಗಳು ಗೃಹ ಬಂಧನ

12:41 PM Apr 06, 2020 | keerthan |

ಬೆಲ್ ಗ್ರೇಡ್: ಕೋವಿಡ್-19 ವೈರಸ್ ಹರಡದಂತೆ ವಿಧಿಸಲಾಗಿದ್ದ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿದ ಸರ್ಬಿಯಾದ ಫುಟ್ ಬಾಲ್ ಆಟಗಾರ ಅಲೆಕ್ಸಾಂಡರ್ ಪ್ರಿಜೋವಿಕ್ ಅವರಿಗೆ ಮೂರು ತಿಂಗಳು ಗೃಹ ಬಂಧನ ವಿಧಿಸಲಾಗಿದೆ.

Advertisement

ಸರ್ಬಿಯಾದ 29ರ ಹರೆಯದ ಸ್ಟ್ರೈಕರ್ ಪ್ರಿಜೋವಿಕ್ ಅವರು ಸೌದಿ ಅರೇಬಿಯಾದ ಕ್ಲಬ್ ಅಲ್ ಇತ್ತಿಹಾದ್ ಪರ ಆಡುತ್ತಿದ್ದರು. ಪ್ರಿಜೋವಿಕ್ ಶನಿವಾರ ಬೆಲ್ ಗ್ರಿಡ್ ನಲ್ಲಿ ವಿಡಿಯೋ ಕಾಲ್ ನಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ದೇಶದಲ್ಲಿ ಸಂಜೆ 5ರಿಂದ ಬೆಳಗ್ಗೆ 5 ಗಂಟೆಯವರೆಗೆ ವಿಧಿಸಲಾಗಿದ್ದ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿದ್ದರು. ಪ್ರಿಜೋವಿಕ್ ಮತ್ತು ಇತರ 16 ಮಂದಿ ಶುಕ್ರವಾರದಂದು ಲಾಕ್ ಡೌನ್ ಉಲ್ಲಂಘಿಸಿ ಬೆಲ್ ಗ್ರೇಡ್ ನ ಹೋಟೇಲ್ ಲಾಬಿಯಲ್ಲಿ ಜೊತೆ ಸೇರಿದ್ದರು.

ಹೀಗೆ ಗೃಹ ಬಂಧನಕ್ಕೆ ಒಳಗಾಗಿರುವ ಸರ್ಬಿಯಾದ ಎರಡನೇ ಆಟಗಾರ. ರಿಯಲ್ ಮ್ಯಾಡ್ರಿಡ್ ಆಡುವ ಸ್ಟ್ರೈಕರ್ ಲೂಕಾ ಜೋವಿಕ್ ಕೂಡಾ ಗೃಹ ಬಂಧನದಲ್ಲಿದ್ದಾರೆ. ಅವರು ಕೂಡಾ ಕಳೆದ ತಿಂಗಳು ತನ್ನ ಗೆಳತಿಯ ಹುಟ್ಟು ಹಬ್ಬದ ಪಾರ್ಟಿ ಮಾಡಲು ಬೆಲ್ ಗ್ರೇಡ್ ನ ಕೆಫೆಗೆ ಬಂದು ಆಚರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next