Advertisement
ಟೋಕನೈಸೇಷನ್ ಎಂದರೆ ನಿಮ್ಮ ಕಾರ್ಡ್‌ಗಳ ನೈಜ ವಿವರಗಳನ್ನು “ಟೋಕನ್’ ಎಂಬ ಪರ್ಯಾಯ ಕೋಡ್ ಮೂಲಕ ಬದಲಿಸು ವುದು. ಈ ಟೋಕನ್‌ನಲ್ಲಿ ಕಾರ್ಡ್‌ದಾರರ ಯಾವುದೇ ವೈಯಕ್ತಿಕ ಮಾಹಿತಿ ಇರುವುದಿಲ್ಲ. ಅಲ್ಲದೇ, ಇದು ಮತ್ತೆ ಮತ್ತೆ ಬದಲಾಗುವ ಕಾರಣ “ಪಾವತಿ’ಗೆ ಅತ್ಯಂತ ಸುರಕ್ಷಿತ ವಿಧಾನ ಎಂದೆನಿಸಿಕೊಳ್ಳಲಿದೆ. ಒಂದು ಬಾರಿ ನಿಮ್ಮ ಕಾರ್ಡ್‌ನ ಟೋಕ ನೈಸೇಷನ್ ಪ್ರಕ್ರಿಯೆ ಪೂರ್ಣಗೊಂಡರೆ, ಯಾವುದೇ ಪಾವತಿ ಮಧ್ಯವರ್ತಿಗಳು, ವ್ಯಾಲೆಟ್ ಮತ್ತು ಆನ್‌ಲೈನ್ ಮರ್ಚೆಂಟ್‌ಗಳು ನಿಮ್ಮ ಕಾರ್ಡ್‌ನ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
Related Articles
Advertisement
ಹೇಗೆ ಮಾಡುವುದು? :
- ಯಾವುದಾದರೂ ಇ-ಕಾಮರ್ಸ್/ಮರ್ಚೆಂಟ್ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಭೇಟಿ ಕೊಟ್ಟು, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿ ವಹಿವಾಟು ಆರಂಭಿಸಿ.
- ಆಗ “ನಿಮ್ಮ ಕಾರ್ಡ್ ಅನ್ನು ಆರ್‌ಬಿಐ ಮಾರ್ಗಸೂಚಿ ಪ್ರಕಾರ ಟೋಕನೈಸ್ ಮಾಡಲು ಬಯಸುತ್ತೀರಾ’ ಅಥವಾ “ನಿಮ್ಮ ಕಾರ್ಡ್ ಅನ್ನು ಸುರಕ್ಷಿತವಾಗಿಡಿ’ ಎಂಬ ಆಯ್ಕೆಗಳನ್ನು ಪೇಮೆಂಟ್ ಪ್ರೊಸೆಸರ್ ತೋರಿಸುತ್ತದೆ.
- ಆ ಆಯ್ಕೆಯನ್ನು ಕ್ಲಿಕ್ ಮಾಡಿ. ಕೂಡಲೇ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್‌ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದ ಕೂಡಲೇ ಟೋಕನ್ ಸೃಷ್ಟಿಯಾಗುತ್ತದೆ.
- ಕೂಡಲೇ ನಿಮ್ಮ ಕಾರ್ಡಿನ ನೈಜ ವಿವರಗಳ ಬದಲಾಗಿ ಅಲ್ಲಿ ಆ ಟೋಕನ್ ಸಂಖ್ಯೆ ಸೇವ್ ಆಗುತ್ತದೆ
- ನಂತರ, ನೀವು ಅದೇ ವೆಬ್‌ಸೈಟ್ ಅಥವಾ ಆ್ಯಪ್‌ಗೆ ಭೇಟಿ ಕೊಟ್ಟಾಗ, ಸೇವ್ ಆಗಿರುವ ನಿಮ್ಮ ಕಾರ್ಡ್‌ನ ಕೊನೆಯ 4 ಅಂಕಿಗಳು ಮಾತ್ರ ನಿಮಗೆ ಕಾಣಿಸುತ್ತವೆ.
- ಆ ಅಂಕಿಗಳನ್ನು ಗುರುತಿಸುವ ಮೂಲಕ ನೀವು ಪಾವತಿ ಪೂರ್ಣಗೊಳಿಸಬಹುದು.