Advertisement

ಸೆಪ್ಟೆಂಬರ್‌ 11ರ ನೆನಪುಗಳು

03:50 AM Mar 26, 2017 | Team Udayavani |

ಅಮೆರಿಕನ್‌ ಸಾಮಾನ್ಯ ಜನಸಮುದಾಯ ಮತ್ತು ಸಂವಿಧಾನದ ನೀತಿ, ನಾನಿಲ್ಲಿ ಕಳೆದಿರುವ ಈ ಹದಿನೇಳು ವರ್ಷಗಳಲ್ಲಿ ಅನೇಕ ಬಾರಿ ಈ ತರಹದ ಒಂದು ಘನತೆಯನ್ನು ನನಗೆ ಮನವರಿಕೆ ಮಾಡಿಸಿದ್ದಿದೆ. ಉದಾಹರಣೆಗೆ ನನ್ನದೇ ಒಂದು ಸಣ್ಣ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

Advertisement

2001ರ ಸೆಪ್ಟೆಂಬರ್‌ 11 ನ್ಯೂಯಾರ್ಕ್‌ನಲ್ಲಿ ವಿಶ್ವ ವಾಣಿಜ್ಯ ಕಟ್ಟಡಗಳಿಗೆ ಭಯೋತ್ಪಾದಕರು ಧಾಳಿ ನಡೆಸಿದ ವೇಳೆ ನಾನು ನನ್ನವನೊಟ್ಟಿಗೆ ಅಮೆರಿಕದ ಪಶ್ಚಿಮ ತೀರದಲ್ಲಿ ಪ್ರವಾಸದಲ್ಲಿದ್ದೆ. ಈ ಘಟನೆ ನಡೆಯುವ ನಾಲ್ಕು ದಿನಗಳ ಹಿಂದಷ್ಟೇ ಪೂರ್ವ ತೀರದ ಬಾಸ್ಟನ್‌ನಿಂದ ಅಮೆರಿಕಾದ ಪಶ್ಚಿಮ ತೀರದ ಕಡೆಗೆ ಹಾರಿ, ಪ್ರಪಂಚದ ಪ್ರಾಕೃತಿಕ ಅದ್ಭುತಗಳಲ್ಲೊಂದಾದ ಗ್ರಾಂಡ್‌ ಕ್ಯಾನ್ಯಾನ್‌ನ ನೀರವ ವಿಸ್ತಾರದ ವಿಸ್ಮಯವನ್ನೂ ಅದರ ಕಣಿವೆ ಕೊರಕಲಿನಲ್ಲಿ ಹಾವಿನಂತೆ ಹಾಯುವ ಕೊಲರಾಡೊ ನದಿಯ ನೀಲಿಯನ್ನೂ ಕಣ್ತುಂಬಿಸಿಕೊಳ್ಳುವ ವೇಳೆ ಬರಲಿರುವ ಇಂಥದೊಂದು ದೊಡ್ಡ ವಿಪತ್ತಿನ ಯಾವ ಮುನ್ಸೂಚನೆಯೂ ಇರಲಿಲ್ಲ. ಹಲವು ಮಿಲಿಯನ್‌ ವರ್ಷಗಳಿಂದ ತನ್ನ ಹಾದಿಗೆ ಅಡ್ಡ ಬಂದ ಕಲ್ಲು ಬೆಟ್ಟಗುಡ್ಡ ಕೊರೆಯುತ್ತ ಸಾವಿರಾರು ಮೈಲಿಗಳಷ್ಟುದ್ದಕ್ಕೂ ವಿಧ ವಿಧ ವಿನ್ಯಾಸಗಳಲ್ಲಿ ಚಿತ್ತಾರ ನಿರ್ಮಿಸಿದ ಕೊಲರಾಡೊ ನದಿಗೆ ಅಲ್ಲೇ ಇನ್ನೂರು ಮೈಲಿಗಳ ಅಂತರದಲ್ಲಿ ತಡೆಯೊಡ್ಡಿ ನಿರ್ಮಿಸಲಾಗಿರುವ ಹೂವರ್‌ ಡ್ಯಾಮನ್ನೂ ನೋಡಿ¨ªಾಯ್ತು. 1930ರ ದಶಕದಲ್ಲಿ ಅಮೆರಿಕ ತೀವ್ರವಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದ ವೇಳೆಯಲ್ಲಿಯೇ ನೆರೆ ತಡೆ, ಕೃಷಿ ಮತ್ತು ಜಲವಿದ್ಯುತ್‌ ಯೋಜನೆಗಳಿಗೆಲ್ಲಾ ಸಹಕಾರಿಯಾಗುವಂತೆ ಇಷ್ಟು ದೊಡª ಅಣೆಕಟ್ಟು ನಿರ್ಮಿಸಿದ ಅಮೆರಿಕನ್ನರ ದೂರದೃಷ್ಟಿಯ ಬಗ್ಗೆ ಮೆಚ್ಚುಗೆ ಅನ್ನಿಸಿತ್ತು. ನಂತರ ಲಾಸ್‌ವೇಗಾಸಿನಲ್ಲಿ ಎರಡು ದಿನ ಕಳೆದು ಅಲ್ಲಿಂದ ಸೆಪ್ಟೆಂಬರ್‌ 12ರಂದು ಯೆÇÉೋಸ್ಟೋನ್‌ ನ್ಯಾಷನಲ… ಪಾರ್ಕಿಗೆ ವಿಮಾನ ಹತ್ತುವ ಯೋಜನೆ ನಮ್ಮದಿತ್ತು. ಆದರೆ, ಅದರ ಹಿಂದಿನ ದಿನ ಸೆಪ್ಟೆಂಬರ್‌ 11ರ ದುರಂತ ಸಂಭವಿಸಿದ್ದೇ ಬಾನಿನಲ್ಲಿದ್ದ ಎಲ್ಲಾ ವಿಮಾನಗಳೂ ಕೆಳಗಿಳಿದು ಎಲ್ಲಾ ಹಾರಾಟಗಳನ್ನೂ ತಾತ್ಕಾಲಿಕವಾಗಿ ಮುಂದೂಡಲಾಯಿತು. ಲಾಸ್‌ವೇಗಾಸಿನ ಹೊಟೇಲ… ಒಂದರ ಟೀವಿಯಲ್ಲಿ ವಾಣಿಜ್ಯಮಳಿಗೆ ಕಟ್ಟಡಕ್ಕೆ ಢಿಕ್ಕಿ ಹೊಡೆದ ವಿಮಾನದ ಚಿತ್ರ ನೋಡುತ್ತ ದಿಗ್ಭ್ರಾಂತರಾಗಿ ಸುದ್ದಿಯನ್ನೂ ಇನ್ನೂ ಅರಗಿಸಿಕೊಳ್ಳುತ್ತಿರುವ ವೇಳೆಯಲ್ಲೇ ಅದರ ಅವಳಿ ಕಟ್ಟಡಕ್ಕೂ ಇನ್ನೊಂದು ವಿಮಾನ ಬಂದು ಅಪ್ಪಳಿಸಿದ್ದನ್ನು ಲೈವ್‌ ಆಗಿಯೇ ನೋಡಿದ ವೇಳೆಗೆ ಥಟ್ಟನೆ ಮನಸ್ಸಿಗೆ ಇದು ಯೋಜಿಸಿ ಮಾಡಿದ ಧಾಳಿಯೇ ಎಂದು ಅನ್ನಿಸಿತ್ತು. ಯೆಲ್ಲೇಸ್ಟೋನಿನ ನಮ್ಮ ಪ್ರವಾಸ ರದ್ದುಗೊಳಿಸಿ ಮತ್ತೆ ನಾಲ್ಕು ದಿನ ತಡವಾಗಿ ಬಾಸ್ಟನ್ನಿಗೆ ಹಾರಿ ಬರಲು ಸಾಧ್ಯವಾದಾಗ ಮೊದಲ ಬಾರಿಗೆ ವಿಮಾನ ನಿಲ್ದಾಣದಲ್ಲಿ ಹಿಂದೆಂದೂ ಇಲ್ಲದಷ್ಟು ಕಟ್ಟೆಚ್ಚರದಲ್ಲಿ ಸುರಕ್ಷಣಾ ತಪಾಸಣೆಗೆ ಎಲ್ಲಾ ಪ್ರಯಾಣಿಕರೂ ಒಳಗಾಗಿ¨ªಾಯ್ತು. ಅದರ ಹಿಂದಿನ ವರ್ಷವಿನ್ನೂ ನಮ್ಮ ನ್ಯೂಯಾರ್ಕ್‌ ಪ್ರವಾಸದಲ್ಲಿ ಅಮೆರಿಕದ ಅತಿ ಎತ್ತರದ ಮಾನವ ನಿರ್ಮಿತಿಗಳಲ್ಲೊಂದಾಗಿದ್ದ ವಾಣಿಜ್ಯ ಮಳಿಗೆ ಕಟ್ಟಡದ ಟೆರೇಸಿನಲ್ಲಿ ನಿಂತು ಆ ಎತ್ತರದಿಂದ ಕಂಡಿದ್ದ ದೃಶ್ಯ, ಮೂಡಿದ್ದ ಭಾವ ಎಲ್ಲವನ್ನೂ ಮತ್ತೆ ಮತ್ತೆ ನೆನೆಸಿಕೊಳ್ಳುತ್ತ¤ ಭಾರವಾದ ಮನಸ್ಸಿನಲ್ಲಿ ಬಾಸ್ಟನ್ನಿಗೆ ಮರಳಿ ಬಂದು ಮನೆ ಸೇರಿಕೊಂಡ ವೇಳೆ ನನ್ನ ಮನಸ್ಸಿಗೆ ತಟ್ಟಿದ ಒಂದು ವಿಷಯವೆಂದರೆ, ಇಷ್ಟು ದೊಡª ದುರಂತದ ವೇಳೆ ಅಮೆರಿಕನ್ನರು ತೋರಿದ ಸಂಯಮ. ಲಕ್ಷಾಂತರ ಜನರು ಸೇರಿ ಈ ದುರಂತದಲ್ಲಿ ಸತ್ತವರ ನೆನಪಿನಲ್ಲಿ ಎಲ್ಲೇಲ್ಲಿಯೂ ವಿಜಿಲೆ…ಗಳನ್ನು ಕೈಗೊಂಡ ಅವಧಿಯಲ್ಲಿಯೂ ಇದು ತೀವ್ರಗಾಮಿ ಮುಸ್ಲಿಂ ಭಯೋತ್ಪಾದನೆಯ ಫ‌ಲವೆಂಬ ಅರಿವು ಇದ್ದ ವೇಳೆಯಲ್ಲಿಯೂ ಆ ಕ್ಷಣಕ್ಕೆ ಅಲ್ಲಿ ಯಾವ ಹಿಂಸಾಚಾರವೂ ಸಂಭವಿಸಿರಲಿಲ್ಲ.

ಶೋಕಾಚರಣೆಯಲ್ಲಿ ಹಿಂಸೆಗೆ ಅವಕಾಶವಿರಲಿಲ್ಲ. ಇದಕ್ಕೆ ಕಾರಣ, ಅಮೆರಿಕದ ಸಾಮಾನ್ಯ ಜನಕ್ಕೆ ಇದರ ಕುರಿತಂತೆ ಇರುವ ಸಾಕಷ್ಟು ಪ್ರಬುದ್ಧ ನಿಲುವು ಮತ್ತು ವ್ಯವಸ್ಥೆಯಲ್ಲಿ ಹಿಂಸಾಚಾರದ ಕುರಿತಂತೆ ಇರುವ ಕಠಿಣ ನಿಲುವು. ನಂತರದ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ಅಹಿತಕರ ಘಟನೆಗಳು ಮೊದಲಾದವು. ನಾವಿದ್ದ ಬಾಸ್ಟನ್‌ ಸಮೀಪದ ಸಬರ್ಬನ್‌ ಊರಿನಲ್ಲೂ ಎಲ್ಲೊ ಯಾರೋ ಒಂದು ಸಮುದಾಯದ ವಿರುದ್ಧ ದ್ವೇಷದ, ಅವಹೇಳನದ ಮಾತುಗಳನ್ನು ಒಳಗೊಂಡಿರುವ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತು. ಆಗ ಥಟ್ಟನೆ ಆ ಊರಿನ, ಹೆಚ್ಚಾಗಿ ಬಿಳಿಯ ಅಮೆರಿಕನ್‌ ಜನರೇ ಇದ್ದ ಸ್ಥಳೀಯರು ಸೇರಿ ಸೌಹಾರ್ದ ಸಮಿತಿಯೊಂದನ್ನು ರಚಿಸಿಕೊಂಡು, ಊರಿನ ಶಾಲೆ, ಕಾಲೇಜು, ನಾಗರಿಕರನ್ನು ಸಂಪರ್ಕಿಸಿ ಅಲ್ಲಿದ್ದ ಅನ್ಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ, ಅದರ ಕುರಿತಂತೆ ಆದರ, ಕುತೂಹಲ ಮೂಡಿಸುವ ಕೆಲಸಗಳನ್ನು ಆಯೋಜಿಸತೊಡಗಿದರು. ಊರಿನ ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿದ್ದ, ಆ ಊರಿನ ನಿವಾಸಿಗಳಾಗಿದ್ದ ವಿಶ್ವದ ಬೇರೆ ಬೇರೆ ಕಡೆಗಳಿಂದ ಬಂದ, ಬೇರೆ ಬೇರೆ ಬಣ್ಣ, ಭಾಷೆ, ಸಂಸ್ಕೃತಿ, ನಂಬಿಕೆಗಳನ್ನಾಚರಿಸುವ ಜನರಿಗೆಲ್ಲ ತಮ್ಮ ಸಂಸ್ಕೃತಿಯ ಪ್ರದರ್ಶನಕ್ಕೆ ಆ ಮೂಲಕ ಅದರ ಕುರಿತು ಎಲ್ಲರ ತಿಳಿವು ಹೆಚ್ಚಿಸುವುದಕ್ಕೆ ಅವಕಾಶ ಕಲ್ಪಿಸಲಾಯಿತು. ನನ್ನ ಬಳಿ ಸಂಗೀತ ಕಲಿಯುತ್ತಿದ್ದ ಏಳು ವರ್ಷದ ಪುಟ್ಟ ಹುಡುಗಿ ಪಲ್ಲವಿ, ನನ್ನಿಂದ ಭುಮ್ಮರೋ ಭೂಮರೋ ಡ್ಯಾ… ಕಲಿತು ಈ ನೃತ್ಯ ಕಾಶ್ಮೀರಿ ಲೋಕನೃತ್ಯದ ಬಾಲಿವುಡ್‌ ರೂಪದಲ್ಲಿದೆ ಎಂದು ಮುದ್ದಾಗಿ ಹೇಳಿ ನೃತ್ಯ ಮಾಡಿ ಇದರಲ್ಲಿ ಭಾಗವಹಿಸಿದ್ದಳು. ಆ ಪುಟ್ಟ ಹುಡುಗಿ ಧರಿಸಿದ್ದ ಬಣ್ಣದ ಗಾಗ್ರಾ ಚೋಲಿ, ಸುಂದರ ವಿನ್ಯಾಸದ ಆಭರಣಗಳು, ಅವಳು ಮಾಡಿಕೊಂಡಿದ್ದ ಅಂದಿನ ಆ ಅಲಂಕಾರ ಮತ್ತವಳ ನೃತ್ಯ ಎಲ್ಲಕ್ಕೂ ಅಪಾರ ಮೆಚ್ಚುಗೆ ಸಂದಿದ್ದವು. ಅಲ್ಲಿಯ ಲೋಕಲ… ಟೀವಿ ಚಾನಲ… ಮತ್ತು ಪತ್ರಿಕೆಯಲ್ಲಿ ಈ ಇಡೀ ಸಮಾರಂಭದ ಫೋಟೋ ವೀಡಿಯೋ ಪ್ರಸಾರವಾಗುತ್ತ ಇದರ ಉದ್ದೇಶವನ್ನು ಮತ್ತೆ ಮತ್ತೆ ಎಲ್ಲರಿಗೂ ಮನದಟ್ಟು ಮಾಡಿಕೊಡುತ್ತ ಅಮೆರಿಕ ಎಲ್ಲರಿಗೂ ತೆರೆದುಕೊಂಡು ಎಲ್ಲ ಸಂಸ್ಕೃತಿಯ ಬಗ್ಗೆಯೂ ಕುತೂಹಲ, ಆಸ್ಥೆ ಹೊಂದಿರುವ ದೇಶ, ನಾವೆಲ್ಲಾ ಹೀಗೇ ಒಟ್ಟಿಗೆಯೇ ಬೆಳೆಯೋಣ ಎಂಬ ಮಾತುಗಳನ್ನು ಆಡಲಾಯಿತು. ಮತ್ತೆ ಆ ಊರಿನಲ್ಲಿ ಅಸಹನೆಯ ಮಾತು ಎಲ್ಲಿಯೂ ಬಂದ ಸುದ್ದಿಯಾಗಲಿಲ್ಲ, ನಮ್ಮ ದಿನ ದಿನದ ಬದುಕಿನಲ್ಲೂ ಯಾವ ವ್ಯತ್ಯಾಸವೂ ಇರಲಿಲ್ಲ. ಜನರಿಂದ ಜನರಿಗಾಗಿ ಜನಗಳಿಂದಾದ ಪ್ರಜಾಪ್ರಭುತ್ವವು ಕ್ರಿಯಾಶೀಲವಾಗುವ ಇಂಥ ಹಲವಾರು ಚಿತ್ರಗಳು ನಾನು ಕಂಡ ಅಮೆರಿಕದಲ್ಲಿ ಹೇರಳವಾಗಿವೆ. 

Advertisement

Udayavani is now on Telegram. Click here to join our channel and stay updated with the latest news.

Next