Advertisement

ಸಾಧಕಿಯರ ಪಟ್ಟಿಯಲ್ಲಿ ಪ್ರತ್ಯೇಕತಾವಾದಿ ನಾಯಕಿ!

09:44 AM Oct 13, 2017 | |

ಶ್ರೀನಗರ:  ಬೇಟಿ ಪಡಾವೋ ಬೇಟಿ ಬಚಾವೋ ಆಂದೋಲನದ ಪೋಸ್ಟರ್‌ನಲ್ಲಿ ಮಹಿಳಾ ಸಾಧಕಿಯರ ಜತೆ ಪ್ರತ್ಯೇಕತಾವಾದಿ ನಾಯಕಿ ಅಂದ್ರಬಿ ಫೋಟೋ ಕೂಡ ಕಾಣಿಸಿಕೊಂಡಿದ್ದು, ಪ್ರಮಾದಕ್ಕಾಗಿ ಅನಂತ್‌ನಾಗ್‌ ಜಿಲ್ಲೆಯ ಮಕ್ಕಳ ಕಲ್ಯಾಣ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. 

Advertisement

ಸಿಎಂ ಮೆಹಬೂಬಾ, ಸಾನಿಯಾ, ಲತಾ ಮಂಗೇಷ್ಕರ್‌, ಕಿರಣ್‌ ಬೇಡಿ ಅವರ ಭಾವಚಿತ್ರದ ಜತೆಗೆ ಅಂದ್ರಬಿ ಭಾವಚಿತ್ರವನ್ನೂ ಹಾಕಲಾಗಿತ್ತು. ಈ ಎಡವಟ್ಟಿನಿಂದಾಗಿ ಸರಕಾರ ತೀವ್ರ ಮುಜುಗರಕ್ಕೊಳಗಾಗಿದೆ. 

ಇದೇ ವೇಳೆ, ಗುರುವಾರ ಪೂಂಛನಲ್ಲಿ ಪಾಕ್‌ ಪಡೆ ನಡೆಸಿದ ಗುಂಡಿನ ದಾಳಿಗೆ ಓರ್ವ ಯೋಧ ಹಾಗೂ ಒಬ್ಬ ನಾಗರಿಕ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next