Advertisement

Khalistan:ಅಮೃತ್ ಪಾಲ್ ಭಾರತಕ್ಕೆ ಬರುವ ಮುನ್ನ ಪಾಕ್ ISI ಜಾರ್ಜಿಯಾಕ್ಕೆ ಕರೆದೊಯ್ದಿದ್ದೇಕೆ

03:15 PM Apr 07, 2023 | Team Udayavani |

ನವದೆಹಲಿ: ಪರಾರಿಯಾಗಿರುವ ಖಲಿಸ್ತಾನಿ ಬೆಂಬಲಿಗ, ಸ್ವಯಂಘೋಷಿತ ಮತ ಬೋಧಕ ಅಮೃತ್ ಪಾಲ್ ಸಿಂಗ್ ಕಳೆದ ಮೂರು ವಾರಗಳಿಂದ ಪಂಜಾಬ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಲೇ ಇರುವ ನಡುವೆಯೇ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಕಳೆದ ವರ್ಷ ಅಮೃತ್ ಪಾಲ್ ಸಿಂಗ್ ಭಾರತಕ್ಕೆ ಆಗಮಿಸುವ ಮುನ್ನವೇ ಪಾಕಿಸ್ತಾನದ ಐಎಸ್ ಐ ಆತನನ್ನು ಜಾರ್ಜಿಯಾಕ್ಕೆ ಕರೆದೊಯ್ದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Must Watch Video: ಮರದಿಂದ ಇನ್ನೊಂದು ಮರಕ್ಕೆ ಜಿಗಿದು ಕೋತಿಯನ್ನು ಬೇಟೆಯಾಡಿದ ಚಿರತೆ!

ಭಿಂದ್ರನ್ ವಾಲೆಯಂತೆ ಕಾಣಿಸಲು ಸರ್ಜರಿ!

ಪಂಜಾಬ್ ನ ಅಮೃತ್ ಸರದಲ್ಲಿ ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಕೊನೆಯುಸಿರೆಳೆದಿದ್ದ ಪ್ರತ್ಯೇಕತಾವಾದಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯಂತೆ ಹೋಲುವಂತೆ ಅಮೃತ್ ಪಾಲ್ ಸಿಂಗ್ ಗೆ ಜಾರ್ಜಿಯಾದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ಗುಪ್ತಚರ ಏಜೆನ್ಸಿ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಗುಪ್ತಚರ ಇಲಾಖೆ ವರದಿ ಪ್ರಕಾರ, 2022ರ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಆಗಮಿಸುವ ಮುನ್ನ ಅಮೃತ್ ಪಾಲ್ ಸಿಂಗ್ ತರಬೇತಿಗಾಗಿ ಜಾರ್ಜಿಯಾಕ್ಕೆ ಭೇಟಿ ನೀಡಿದ್ದ. ಅಮೃತ್ ಪಾಲ್ 2022ರ ಜೂನ್ 20ರಿಂದ 2022ರ ಆಗಸ್ಟ್ 18ರವರೆಗೆ ಜಾರ್ಜಿಯಾದಲ್ಲಿರುವುದಾಗಿ ಮೂಲಗಳು ಹೇಳಿವೆ.

Advertisement

ಅಧಿಕಾರಿಗಳ ಮಾಹಿಯಂತೆ, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತಾನು ಜಾರ್ಜಿಯಾಕ್ಕೆ ಬಂದಿರುವುದಾಗಿ ತನ್ನ ನಿಕಟವರ್ತಿಗಳಿಗೆ ಅಮೃತ್ ಪಾಲ್ ತಿಳಿಸಿದ್ದನಂತೆ. ಆದರೆ ಅಧಿಕಾರಿಗಳ ಶಂಕೆಯ ಪ್ರಕಾರ, ಸುಮಾರು ಎರಡು ತಿಂಗಳ ಕಾಲ ಜಾರ್ಜಿಯಾದಲ್ಲಿ ಅಮೃತ್ ಪಾಲ್ ಸಿಂಗ್ ಐಎಸ್ ಐ ಶಸ್ತ್ರಾಸ್ತ್ರ ತರಬೇತಿ ನೀಡಿರುವುದಾಗಿ ತಿಳಿಸಿದ್ದಾರೆ.

ಮಾರ್ಚ್ 18ರಂದು ಪಂಜಾಬ್ ಪೊಲೀಸರು ಅಮೃತ್ ಪಾಲ್ ಸಿಂಗ್ ನೇತೃತ್ವದ ವಾರಿಸ್ ಪಂಜಾಬ್ ದೇ ವಿರುದ್ಧ ದಾಳಿ ನಡೆಸಲು ಆರಂಭಿಸಿದಾಗಿನಿಂದ ಸಿಂಗ್ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಈಗಾಗಲೇ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದು, ಈತನ ಬಂಧನಕ್ಕಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ದೀಪ್ ಸಿಧು ನಿಧನದ ನಂತರ ಅಮೃತ್ ಪಾಲ್ ಸಿಂಗ್ ದುಬೈಯಲ್ಲಿ ಐಎಸ್ ಐ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ 2022ರ ಫೆಬ್ರುವರಿಯಲ್ಲಿ ಅಮೃತ್ ಪಾಲ್ ವಾರಿಸ್ ಪಂಜಾಬ್ ದೇ ಸಂಘಟನೆಯ ನೇತೃತ್ವ ವಹಿಸಿಕೊಂಡಿರುವುದಾಗಿ ಪಂಜಾಬ್ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ವಾರಿಸ್ ಪಂಜಾಬ್ ದೇ ನಾಯಕತ್ವ ಕೊಡಿಸುವ ಮೂಲಕ ಅಮೃತ್ ಪಾಲ್ ಸಿಂಗ್ ನನ್ನು ಆಧುನಿಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯಂತೆ ರೂಪುಗೊಳಿಸಲು ಐಎಸ್ ಐ ಸಂಚು ನಡೆಸಿರುವುದಾಗಿ ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next