Advertisement
ಹೆದ್ದಾರಿ ಬದಿ, ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ತಂದು ಸುರಿಯುವವರ ವಿರುದ್ಧ ದುರಂತ ನಿವಾರಣೆ ಕಾಯಿದೆ ಸಹಿತ ಕಾನೂನು ಕ್ರಮ ನಡೆಸುವುದಾಗಿ ಅವರು ತಿಳಿಸಿದರು.
ಜಲಾಶಯಗಳನ್ನು ಮಲಿನಗೊಳಿಸುವುದು ಮೂರು ವರ್ಷ ವರೆಗಿನ ಸಜೆ ಅಥವಾ 2 ಲಕ್ಷ ರೂ. ದಂಡ ಯಾ ಎರಡೂ ಶಿಕ್ಷೆ ಜತೆಗೆ ನೀಡಬಹುದಾದ ಅಪರಾಧವಾಗಿದೆ.
Related Articles
ಗ್ರಾಮ ಪಂಚಾಯತ್,ನಗರಸಭೆ ಕಾರ್ಯದರ್ಶಿ,ಪೊಲೀಸರು,ತ್ಯಾಜ್ಯ ನಿಯಂತ್ರಣ ಮಂಡಳಿ ಜಿಲ್ಲಾ ಸಿಬ್ಬಂದಿ ಈ ಸಂಬಂಧ ಕ್ರಮಕೈಗೊಳ್ಳಬಹುದಾಗಿದೆ.
Advertisement
ಜಲಾಶಯ,ಜಲಮೂಲ,ಜಲವಿತರಣೆ ಸೌಲಭ್ಯಗಳನ್ನು ಮಲಿನಗೊಳಿಸುವ ರೀತಿ ತ್ಯಾಜ್ಯ ಹರಿಯ ಬಿಟ್ಟರೆ ಅದು ಶಿಕ್ಷಾರ್ಹವಾಗಿದೆ. ಜಲಮಲಿನೀಕರಣ (ನಿಯಂತ್ರಣ ಮತ್ತು ನಿವಾರಣೆ) ಕಾಯಿದೆ 1974 ಸೆಕ್ಷನ್ 43 ಪ್ರಕಾರ ಒಂದೂವರೆ ವರ್ಷಕ್ಕಿಂತ ಕಡಿಮೆಯಾಗದ, 6 ವರ್ಷಕ್ಕಿಂತ ಅಧಿಕವಲ್ಲದ ಸಜೆ ಸಿಗಬಹುದಾಗಿದೆ.
ಪ್ರತ್ಯೇಕ ಸ್ಕ್ವಾಡ್ತ್ಯಾಜ್ಯ ತಂದು ಸುರಿಯುವವರ ವಿರುದ್ಧ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ಸ್ಕ್ವಾಡ್‌ಗಳನ್ನು ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು. ಸಾರ್ವಜನಿಕ ಆರೋಗ್ಯ ಸಂರಕ್ಷಣೆ ಪರಿಶೀಲಿಸಿ ಈ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದರು. ಪೊಲೀಸ್, ಕಂದಾಯ, ಗ್ರಾಮ ಪಂಚಾಯತ್ ಮತ್ತು ನಗರಸಭೆ ಸಿಬಂದಿ ಸೇರಿ ಸ್ಕ್ವಾಡ್ ರಚಿಸಲಾಗುವುದು. ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆಯ ಸಿಬಂದಿಯೂ ಇರುವರು. ತೀವ್ರ ಶುಚೀಕರಣ ಯಜ್ಞ : 4 ಸಾವಿರ ಮಂದಿ ಭಾಗಿ : ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯ ಹೆದ್ದಾರಿ ಬದಿ ನಡೆಸಲಾದ ತೀವ್ರ ಶುಚೀಕರಣ ಯಜ್ಞದಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಶ್ರಮದಾನ ನಡೆಸಿದರು. 15 ಮೆಟ್ರಿಕ್ ಟನ್ ತ್ಯಾಜ್ಯ ಈ ಮೂಲಕ ಸಂಗ್ರಹಿಸಲಾಗಿದೆ. 2600 ಮಂದಿ ವಿವಿಧ ಸಂಘಟನೆಗಳ ಪ್ರತಿನಿ ಧಿಗಳು, ಜನಪ್ರತಿನಿಧಿಗಳು, ಸಿಬಂದಿ, ಶಿಕ್ಷಕರು, ಉದ್ಯೋಗ ಖಾತರಿ ಯೋಜನೆ ಕಾರ್ಯಕರ್ತರು ಈ ಕಾಯಕ ನಡೆಸಿದರು.