Advertisement
ತೋಕೂರು ಬಳಿಯಿಂದ ಎಂಆರ್‌ಪಿಎಲ್ ವರೆಗೆ ಒಟ್ಟು 3.52 ಕಿ.ಮೀ ಉದ್ದದ ರೈಲ್ವೆ ಹಳಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ 2016ರ ಅಕ್ಟೋಬರ್‌ನಲ್ಲಿ ಎಂಆರ್‌ಪಿಎಲ್ ಹಾಗೂ ಕೊಂಕಣ ರೈಲ್ವೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಪೆಟ್ ಕೋಕ್, ಪಾಲಿಪ್ರಾಪಿಲಿನ್, ಸಲ ರ್, ಬಿಟುಮಿನ್ ಸಾಗಾಟಕ್ಕೆ ಈ ಹೊಸ ರೈಲ್ವೆ ಸಂಪರ್ಕ ಸಹಕಾರಿಯಾಗಲಿದೆ. ಮಾಲಿನ್ಯಕಾರಕ ವಸ್ತುಗಳನ್ನು ಇನ್ನು ಗೂಡ್ಸ್ ರೈಲುಗಳ ಮೂಲಕ ಸಾಗಿಸುವುದರಿಂದ ಬೃಹತ್ ಗಾತ್ರದ ಲಾರಿಗಳ ಓಡಾಟ ಕಡಿಮೆಯಾಗಲಿದೆ. ಎಂಆರ್‌ಪಿಎಲ್ ಹಳಿ ಸಂಪರ್ಕ ಭಾಗದಲ್ಲಿ ನೀರಿನ ಒರತೆಯನ್ನು ತಾಳಿಕೊಳ್ಳಬಲ್ಲ ಅಗಲವಾದ, ಅತ್ಯಾಧುನಿಕ ಮಾದರಿಯ ರಸ್ತೆ ನಿರ್ಮಾಣವಾಗಲಿದೆ. ನಾಲ್ಕು ಗ್ಯಾಸ್ ಪೈಪ್‌ಲೈನ್ ಸಾಗಾಟ ಸೇರಿದಂತೆ ಬಹೂಪಯೋಗಿ 10 ಕಿರು ಸೇತುವೆಗಳು ನಿರ್ಮಾಣವಾಗಲಿವೆ. ನೀರು ನಿಲ್ಲುವ ಪ್ರದೇಶವಾಗಿರುವುದರಿಂದ ರೈಲ್ವೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ರೈಲ್ವೆ ಹಳಿ ಹಾಕಲು ಕ್ರಮ ಕೈಗೊಂಡಿದೆ.
ನಷ್ಟದಲ್ಲಿರುವ ಕೊಂಕಣ ರೈಲ್ವೆಗೆ ಚೇತರಿಕೆ ನೀಡುವ ಸಲುವಾಗಿ ಗೂಡ್ಸ್ ರೈಲುಗಳನ್ನು ಓಡಿಸುವತ್ತ ಪ್ರಮುಖ ಹೆಜ್ಜೆ ಇಡಲಾಗಿದೆ. ಇದಕ್ಕಾಗಿ ತೋಕೂರು ಬಳಿ ಗೂಡ್ಸ್ ಸೈಡಿಂಗ್ ಮಾಡಲು ಯೋಜನೆ ಕಾರ್ಯಗತಗೊಳ್ಳುತ್ತಿದೆ. ಬಂದರಿನಲ್ಲಿ ರೈಲ್ವೆ ಸರಕು ಇಳಿಸುವ ವ್ಯವಸ್ಥೆ ಇದ್ದು, ಇದೀಗ ಕೊಂಕಣ ರೈಲ್ವೆ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದೆ. ಇದಕ್ಕಾಗಿ 1.75 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ನಿರ್ವಹಣೆ ಗುತ್ತಿಗೆಯನ್ನು ಆಳ್ವಾರಿಸ್ ಮತ್ತು ರಫ್ತಾರ್ ಕಂಪನಿ ಪಡೆದುಕೊಂಡಿವೆ. ಐದು ಸಾವಿರ ಚದರ ಅಡಿ ರೈಲ್ವೆ ಜಾಗದಲ್ಲಿ ಸುಸಜ್ಜಿತ ಗೋದಾಮು, ಸಾಗಾಟ ವ್ಯವಸ್ಥೆ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಿಂದ ಪಣಂಬೂರು, ಸುರತ್ಕಲ್, ಪಡುಬಿದ್ರಿ ಪ್ರದೇಶಗಳಿಗೆ ಸರಕನ್ನು ಕ್ಲಪ್ತ ಸಮಯಕ್ಕೆ ಸಾಗಿಸಲು ಸಾಧ್ಯವಿದೆ. ಇಲ್ಲಿನ ಕಂಪನಿಗಳು ಸದ್ಬಳಕೆ ಮಾಡಿಕೊಂಡರೆ ಕೊಂಕಣ ರೈಲ್ವೆಗೆ ಆದಾಯವೂ ಬರಲಿದೆ. ಎಪಿಎಂಸಿ ಸಹಿತ ಬೃಹತ್ ಮತ್ತು ಕಿರು ರಖಂ ವ್ಯಾಪರಸ್ಥರಿದ್ದು, ರೈಲ್ವೆಯ ಮೂಲಕ ಸರಕನ್ನು ಕಡಿಮೆ
ವೆಚ್ಚದಲ್ಲಿ ಸಾಗಿಸಬಹುದಾಗಿದೆ. ಸುರಕ್ಷಿತ ಸಾಗಾಟ
ಎಂಆರ್‌ಪಿಎಲ್‌ಗೆ ಪ್ರತ್ಯೇಕ ರೈಲ್ವೆ ಹಳಿ ನಿರ್ಮಾಣವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ. ಸರಕನ್ನು ನೇರವಾಗಿ ಕಂಪನಿಯ ಒಳಭಾಗದಲ್ಲೇ ನಿರ್ವಹಿಸಿ ಲೋಡ್ ಮಾಡುವ ಮೂಲಕ ಬೇರೆಡೆ ಒಯ್ಯಲಾಗುತ್ತದೆ. ಇದರಿಂದ ಸಮಯ ಉಳಿತಾಯದ ಜತೆಗೆ ಸುರಕ್ಷಿತ ಸಾಗಾಟಕ್ಕೂ ಅನುಕೂಲವಾಗಲಿದೆ.
– ವಿಜಯ್ ಕುಮಾರ್, ಸಹಾಯಕ ಎಂಜಿನಿಯರ್,
ಕೊಂಕಣ ರೈಲ್ವೆ
Related Articles
ನಷ್ಟದಲ್ಲಿರುವ ಕೊಂಕಣ ರೈಲ್ವೆ ನಿಗಮಕ್ಕೆ ಪ್ರಯಾಣಿಕ ಆದಾಯದ ಜತೆಗೆ ಗೂಡ್ಸ್ ಸಾಗಾಟದಿಂದಲೂ ಹೆಚ್ಚಿನ ಆದಾಯ ಬಂದರೆ ನಷ್ಟದ ಪ್ರಮಾಣ ಕಡಿಮೆ ಮಾಡಿ ಲಾಭದತ್ತ ಸಾಗಲು ಸಾಧ್ಯವಾಗಲಿದೆ. ತೋಕೂರಿನಲ್ಲಿ ನಿರ್ಮಿಸುತ್ತಿರುವ ಗೂಡ್ಸ್ ಸೈಡಿಂಗ್ ಜಿಲ್ಲೆಯಲ್ಲೇ ಮೊದಲನೆಯದ್ದು. ಉಡುಪಿ ವಿಭಾಗದಲ್ಲೂ ನಿರ್ಮಾಣವಾಗುತ್ತಿದೆ. ಸ್ಥಳೀಯ ವ್ಯಾಪರಸ್ಥರಿಗೆ ಇದರಿಂದ ಪ್ರಯೋಜನವಾಗಲಿದ್ದು ಸರಕುಗಳನ್ನು ಸಾಗಿಸಲು ಸುಲಭವಾಗಲಿದೆ. ಇದರ ನಿರ್ವಹಣೆಗೆ ಎರಡು ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುವುದು.
– ಸುಧಾ ಕೃಷ್ಣ ಮೂರ್ತಿ,
ಸಾರ್ವಜನಿಕ ಸಂಪರ್ಕಾ ಧಿಕಾರಿ,
ಕೊಂಕಣ ರೈಲ್ವೆ ಉಡುಪಿ
Advertisement
ಲಕ್ಷ್ಮೀ ನಾರಾಯಣ ರಾವ್