Advertisement
ರಾಷ್ಟ್ರೀಯ ಇನೋಮೆಟಿಕ್ಸ್ ಸೆಂಟರ್ ಅಭಿವೃದ್ಧಿ ಪಡಿಸಿದ “ರಬ್ ಎಸ್‌ಐಎಸ್’ ಎಂಬ ಹೆಸರಿನ ಹೊಸ ಆ್ಯಪ್ ಕೇರಳದ ರಬ್ಬರ್ ಬೆಳೆಗಾರರ ಮತ್ತು ಮಂಡಳಿಯ ಮಧ್ಯೆ ಕಾರ್ಯಾಚರಿಸಲಿದೆ. ರಬ್ ಎಸ್‌ಐಎಸ್ ಎಂಬ ಆ್ಯಪ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಅವಕಾಶವಿದೆ.
Related Articles
Advertisement
ಈ ಆ್ಯಪ್ ರಸಗೊಬ್ಬರಗಳ ಅತ್ಯುತ್ತಮ ಬಳಕೆ, ಕಡಿಮೆ ವೆಚ್ಚದಲ್ಲಿ ಕೃಷಿ ಉತ್ಪಾ ದನೆಯನ್ನು ಹೆಚ್ಚಿಸುವ ಮತ್ತು ಆದಾಯ ಇಮ್ಮಡಿಗೊಳಿಸುವ ಮಾಹಿತಿ ಒದಗಿಸುತ್ತದೆ. ಇನ್ನೊಂದೆಡೆ ಮಣ್ಣಿನ ಸಂರಕ್ಷಣೆ ಮತ್ತು ಪರಿಸರ ಮಾಲಿನ್ಯ ವನ್ನು ಕಡಿಮೆ ಮಾಡುವ ಸಲುವಾಗಿ ಸಲಹೆಗಳನ್ನು ನೀಡಲಾಗುತ್ತದೆ.
ಈ ರಬ್ ಎಸ್‌ಐಎಸ್ ಆ್ಯಪ್ ಅಂದರೆ ಮಣ್ಣಿನೊಂದಿಗೆ ವಿಜ್ಞಾನ, ಕೃಷಿ ವಿಜ್ಞಾನ, ಜಿಯೋಸ್ಪೇಷಿಯಲ್ ತಂತ್ರಜ್ಞಾನ ಹಾಗೂ ಐಸಿಟಿಗಳ ತತ್ವಗಳ ಸಂಯೋಜನೆಯಾಗಿದೆ. ಇದು ರಬ್ಬರ್ ಸಂಶೋಧನಾ ಸಂಸ್ಥೆಯಿಂದಲೇ ಪೂರ್ಣ ವಾಗಿ ರೂಪಿಸಲ್ಪಟ್ಟಿದ್ದು ಜೊತೆಗೆ ಇಸ್ರೋ ಮ್ಯಾಪಿಂಗ್ ರಬ್ಬರ್ ಪ್ಲಾಂಟೇಶನ್, ಮಣ್ಣಿನ ಫಲವತ್ತತೆ ವಿಶ್ಲೇಷಣೆ ಮತ್ತು ಆ ಬಗೆಯ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಪರಿಣಾಮಕಾರಿಯಾಗಿದೆ.
ಪ್ರಸ್ತುತ ರಬ್ ಎಸ್‌ಐಎಸ್ ಕೇರಳದಲ್ಲಿ ರಬ್ಬರ್ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಲಭಿಸಲಿದೆ. ಮುಂದಿನ ಹಂತದಲ್ಲಿ ದಕ್ಷಿಣ ಭಾರತದ ರಬ್ಬರ್ ಬೆಳೆಗಾರರಿಗೆ ದೊರಕುವ ನಿಟ್ಟಿನಲ್ಲಿ ಸಂಬಂಧಿತ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲೂ ವಿವಿಧ ಯೋಜನೆ ಜಾರಿಕೇರಳದ ರಬ್ಬರ್ ಕೃಷಿಕರಿಗೆ ಪ್ರತ್ಯೇಕ ಮೊಬೈಲ್ ಆ್ಯಪ್ ಜಾರಿಗೊಳಿಸುವುದು ಕಾಸರಗೋಡು ಜಿಲ್ಲೆಯ ರಬ್ಬರ್ ಬೆಳೆಗಾರರಲ್ಲಿ ಅತೀವ ಸಂತಸ ತಂದಿದೆ. ಈ ಮೂಲಕ ಜಿಲ್ಲೆಯ ರಬ್ಬರ್ ಕೃಷಿಯನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಹೊಂದಲಾಗಿದೆ. ಜಿಲ್ಲೆಯ ಪ್ರಮುಖ ಬೆಳೆ ರಬ್ಬರ್ ಅಲ್ಲದಿದ್ದರೂ, ರಬ್ಬರ್ ಕೃಷಿಯನ್ನು ಇದೀಗ ಜಿಲ್ಲೆಯ ಹಲವೆಡೆಗಳಿಗೆ ವಿಸ್ತರಿಸಲಾಗಿದೆ. ಆದರೆ ಇಲ್ಲಿನ ಮಣ್ಣು ರಬ್ಬರ್ ಬೆಳೆಗೆ ಅಷ್ಟೊಂದು ಹೇಳಿಸಿದಲ್ಲ. ಆದ್ದರಿಂದಲೇ ಜಿಲ್ಲೆಯಲ್ಲಿ ರಬ್ಬರ್ ಕೃಷಿಯಲ್ಲಿ ವಿಪರೀತ ಆದಾಯ ಬರುತ್ತಿಲ್ಲ. ಈ ಮಧ್ಯೆ ಹೊಸ ಮೊಬೈಲ್ ಆ್ಯಪ್ ಮೂಲಕ ಜಿಲ್ಲೆಯ ರಬ್ಬರ್ ಬೆಳೆಗಾರರನ್ನು ಸಂರಕ್ಷಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ.