ಹೈದರಾಬಾದ್: ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಖ್ಯಾತ ಸಂಸ್ಥೆ, ಹೋಮಿಯೋಕೇರ್ ಇಂಟರ್‌ನ್ಯಾಷನಲ್ ನಾನಾ ವಿಧಧ ಕೀಲು ಮತ್ತು ಮೂಳೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ಮತ್ತು ಸೇವೆಗಳನ್ನು ಒದಗಿಸುವ ಆರ್ಥೋಪೆಡಿಕ್ ಕ್ಲಿನಿಕ್ “ಜಾಯಿಂಟ್ ಸೆಲ್’ ಆರಂಭಿಸಿದೆ.
ಕರ್ನೂಲ್‌ನಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಕೆ.ಇ.ಕೃಷ್ಣಮೂರ್ತಿ, ರಾಜ್ಯಸಭಾ ಸದಸ್ಯ ಟಿ.ಜಿ. ವೆಂಕಟೇಶ್ ಹಾಗೂ ಸಂಸ್ಥೆಯ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ್ ಮೊರ್ಲಾವಾರ್ ಅವರು ಜಂಟಿಯಾಗಿ ಹೋಮಿಯೋಕೇರ್ ಇಂಟರ್‌ನ್ಯಾಷನಲ್‌ನ ಜಾಯಿಂಟ್ ಸೆಲ್ ಕ್ಲಿನಿಕ್‌ಗೆ ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಶ್ರೀಕಾಂತ್ ಮೊರ್ಲಾವಾರ್ ಅವರು ಮಾತನಾಡಿ, ಆರ್ಥೋಪೆಡಿಕ್ ಸಮಸ್ಯೆಗಳಾದ ಆಸ್ಟಿಯೋ ಆರ್ಥರೈಟಿಸ್, ಸೆರ್ವಿಕಲ್ ಸ್ಪಾಂಡಿಲೊಸಿಸ್, ಡಿಸ್ಕ್ ಪ್ರಾಬ್ಲಿಂ, ರೂಮಟೈಡ್ ಆರ್ಥರೈಟಿಸ್, ಗೌಟಿ ಆರ್ಥರೈಟಿಸ್ ಮತ್ತು ಸೊರಿಯಾಟಿಕ್ ಆರ್ಥರೈಟಿಸ್ ಕಾಯಿಲೆಗಳಿಗೆ ಜಾಯಿಂಟ್ ಸೆಲ್ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು.
ನಮ್ಮ ಸಮೂಹದ ಎಲ್ಲಾ ಕ್ಲಿನಿಕ್‌ಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಘಟಕವನ್ನು ತೆರೆಯಲಾಗುವುದು. ಜಾಯಿಂಟ್ ಸೆಲ್‌ನಲ್ಲಿ ಎಲ್ಲಾ ರೀತಿಯ ಕೀಲು ನೋವುಗಳನ್ನು ದೂರಾಗಿಸಲಾಗುವುದು. ಯಾವುದೇ ಅಡ್ಡ ಪರಿಣಾಮ ಹಾಗೂ ಶಸ್ತ್ರಚಿಕಿತ್ಸೆಯಿಲ್ಲದೆ ನೋವು, ಕಾಯಿಲೆಯನ್ನು ಗುಣಪಡಿಸಲಾಗುವುದು ಎಂದು ಹೇಳಿದರು.
ಆಂಧ್ರ, ಕರ್ನಾಟಕ, ಪುದುಚೇರಿ, ತಮಿಳುನಾಡು ಹಾಗೂ ತೆಲಂಗಾಣ ಸೇರಿದಂತೆ ಸಮೂಹದ ಎಲ್ಲ ಹೋಮಿಯೋಕೇರ್ ಇಂಟರ್‌ನ್ಯಾಷನಲ್ ಕೇಂದ್ರಗಳಲ್ಲಿ ಆರ್ಥೋಪೆಡಿಕ್ ಕ್ಲಿನಿಕ್ ತೆರೆಯಲಾಗುವುದು. ಆರ್ಥೋಪೆಡಿಕ್ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಇಂದಿನಿಂದ 45 ದಿನಗಳು ವಿಶೇಷ ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.