Advertisement

ಪ್ರತ್ಯೇಕ ವಿಮಾನ ಸೌಲಭ್ಯ

06:00 AM Mar 13, 2018 | Team Udayavani |

ಹೊಸದಿಲ್ಲಿ: 2020ರ ಒಳಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಕೈಗೊಳ್ಳುವ ಪ್ರಯಾಣಕ್ಕೆ ಪ್ರತ್ಯೇಕ ವಿಮಾನ ಲಭ್ಯವಾಗಲಿದೆ. ಈ ಉದ್ದೇಶಕ್ಕಾಗಿ ಏರ್‌ ಇಂಡಿಯಾ ಬೋಯಿಂಗ್‌ 777-300 ಇಆರ್‌ ಮಾದರಿಯ 3 ಹೊಸ ವಿಮಾನಗಳನ್ನು ಖರೀದಿಸಿದೆ. ಅದರಲ್ಲಿ ವೈ-ಫೈ ವ್ಯವಸ್ಥೆ, ಪತ್ರಿಕಾಗೋಷ್ಠಿ ನಡೆಸುವ ಕೊಠಡಿ, ತುರ್ತು ವ್ಯವಸ್ಥೆಯಲ್ಲಿ ವೈದ್ಯಕೀಯ ಸೌಲಭ್ಯ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ  ಏರ್‌ ಇಂಡಿಯಾದ  ಇತರ ವಿಮಾನಗಳನ್ನು ವಿವಿಐಪಿ ಪ್ರಯಾಣಕ್ಕೆ ಬಳಕೆ ಮಾಡಬೇಕಾದ ಸ್ಥಿತಿ ಇರುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next