Advertisement

Separate case: ನೀರಿಗೆ ಬಿದ್ದು ಮೂವರ ಸಾವು; ನವರಾತ್ರಿ ಸಂಭ್ರಮಕ್ಕೆ ಕರಾಳ ಛಾಯೆ

11:52 PM Oct 22, 2023 | Team Udayavani |

ತೆಕ್ಕಟ್ಟೆ/ಹೆಬ್ರಿ: ಬೇಳೂರು ಗ್ರಾ.ಪಂ. ವ್ಯಾಪ್ತಿಯ ಕೋಣಬಗೆ ರೈಲ್ವೇ ಸೇತುವೆ ಸಮೀಪದ ಹಿರೇಹೊಳೆಯ ಆರ್ಬೆಟ್ಟು ಹೊಳೆಯಲ್ಲಿ ಅ. 22ರಂದು ಸಂಜೆ ಕಾಲು ಜಾರಿ ಹೊಳೆಗೆ ಬಿದ್ದು ಸ್ಥಳೀಯ ನಿವಾಸಿ ಪ್ರಶಾಂತ್‌ ಆಚಾರ್ಯ (24) ಮೃತಪಟ್ಟಿದ್ದಾರೆ.

Advertisement

ಕಾಲು ತೊಳೆಯಲೆಂದು ತೆರಳಿದ್ದ ಪ್ರಶಾಂತ್‌ ಕಾಲುಜಾರಿ ಹೊಳೆಗೆ ಬಿದ್ದರು. ನೀರಿನ ಒಳಹರಿವು ಅಧಿಕವಾಗಿದ್ದ ಪರಿಣಾಮ ಸೆಳೆತಕ್ಕೆ ಸಿಲುಕಿ ಮೃತಪಟ್ಟರು ಎನ್ನಲಾಗಿದೆ. ಪ್ರಶಾಂತ್‌ ಮೂರು ತಿಂಗಳಿಂದ ವೈದ್ಯಕೀಯ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕತ್ತಲಲ್ಲಿ ಕಾರ್ಯಾಚರಣೆ
ನಾಪತ್ತೆಯಾದ ಯುವಕನ ಪತ್ತೆಗಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಸ್ಥಳಕ್ಕೆ ಬಂದಾಗ ಕತ್ತಲಾಗಿದ್ದರಿಂದ ಬೈಕ್‌ನ ಹೆಡ್‌ ಲೈಟ್‌ ಬೆಳಗಿಸಿ ಶೋಧಕಾರ್ಯ ಮುಂದುವರಿಸಿದರು. ಸ್ಥಳದಿಂದ ಅನತಿ ದೂರದಲ್ಲಿಯೇ ಮೃತದೇಹ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.

ಕುಟುಂಬದ ಆಸರೆ
ತಂದೆ ಕೇಶವ ಆಚಾರ್ಯ ಅವರು ಮರದ ಕೆಲಸ ಮಾಡಿಕೊಂಡು ಬಡತನದ ನಡುವೆಯೂ ತನ್ನಿಬ್ಬರು ಮಕ್ಕಳಿಗೆ ಶಿಕ್ಷಣ ನೀಡಿ, ಜೀವನ ನಿರ್ವಹಿಸುತ್ತಿದ್ದರು. ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದ ಮಗನನ್ನು ಕಳೆದುಕೊಂಡು ಇಡೀ ಕುಟುಂಬವೇ ಕಂಗಾಲಾಗಿದೆ.

ಮೃತರು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾರೆ. ಘಟನ ಸ್ಥಳಕ್ಕೆ ಕೋಟ ಪೊಲೀಸ್‌ ಎಎಸ್‌ಐ ಗೋಪಾಲ ಪೂಜಾರಿ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

Advertisement

ಹೆಬ್ರಿ:  ಸಮೀಪದ ಕಬ್ಬಿನಾಲೆ ಮತ್ತು ಬೇಳೂರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹಿರೇಹೊಳೆಯ ಅರ್ಬೆಟ್ಟು ಎಂಬಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಮೂವರು ಯುವಕರು ಮೃತಪಟ್ಟ ಘಟನೆ ಸಂಭವಿಸಿದೆ.

ಕಬ್ಬಿನಾಲೆಯ ಮತ್ತಾವು ಫಾಲ್ಸ್‌ಗೆ ಸ್ನಾನಕ್ಕೆ ಹೋದ ಇಬ್ಬರು ಯುವಕರು ನೀರುಪಾಲಾಗಿ ಮೃತಪಟ್ಟರೆ ಅರ್ಬೆಟ್ಟುವಿನಲ್ಲಿ ಯುವಕನೋರ್ವ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟಿದ್ದಾನೆ.

ಹೆಬ್ರಿ ಸಮೀಪ ಕಬ್ಬಿನಾಲೆ ಮತ್ತಾವು ಫಾಲ್ಸ್‌ಗೆ ಸ್ನಾನಕ್ಕೆಂದು ಹೋದ ಎಂಜಿನಿಯರಿಂಗ್‌ ವಿದ್ಯಾರ್ಥಿ ಚಾರ ಹುತ್ತುರ್ಕೆ ನಿವಾಸಿ ಪ್ರಸ್ತುತ್‌ ಹೆಗ್ಡೆ (21) ಹಾಗೂ ಸ್ನೇಹಿತ ಕರ್ಜೆ ನಿವಾಸಿ ಉಮೇಶ್‌ ಕುಮಾರ್‌ (45) ಮೃತಪಟ್ಟಿದ್ದಾರೆ.
ಇವರಿಬ್ಬರು ಅ. 21ರಂದು ಸಂಜೆ 2 ಗಂಟೆಗೆ ಸ್ನಾನಕ್ಕೆ ಹೋದವರು ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಪ್ರಸ್ತುತ್‌ ಹೆಗ್ಡೆ ಬಹಳಷ್ಟು ಹೊತ್ತಾದರೂ ಮನೆಗೆ ಬಾರದ ಅವರ ಮೊಬೈಲ್‌ಗೆ ಹಿನ್ನೆಲೆಯಲ್ಲಿ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಇದರಿಂದ ಗಾಬರಿಗೊಂಡು ಮೊಬೈಲ್‌ನಲ್ಲಿ ಲೋಕೇಶನ್‌ ಹುಡುಕಾಡಿದಾಗ ಕಬ್ಬಿನಾಲೆ ಮತ್ತಾವು ಬಳಿ ಮೊಬೈಲ್‌ ಇರುವುದು ಕಂಡು ಬಂತು. ಹೆಬ್ರಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರ ಸಹಾಯದಿಂದ ಹುಡುಕಾಡಿದಾಗ ತಡರಾತ್ರಿ ಮೃತದೇಹ ಪತ್ತೆಯಾಯಿತು.

ಮತ್ತಾವು ಫಾಲ್ಸ್ ನಲ್ಲಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಸ್ತುತ್‌ ಅವರು ಹೆತ್ತವರು ಮತ್ತು ಸಹೋದರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next