Advertisement
“ಮಮ್ಮಿ ಸೇವ್ ಮಿ’ ಚಿತ್ರ ಯಶಸ್ಸು ಪಡೆದಿತ್ತು. ಅದೇ ಜೋಶ್‌ನಲ್ಲಿ ನಿರ್ದೇಶಕ ಲೋಹಿತ್, ಪ್ರಿಯಾಂಕ ಉಪೇಂದ್ರ ಅವರ ಜೊತೆ ಅದೇ ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ ಉಪೇಂದ್ರ ಪುತ್ರಿ ಐಶ್ವರ್ಯಾ ಅವರು ಇಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಆ ಸಿನಿಮಾ ಕುರಿತು ನಿರ್ದೇಶಕ ಲೋಹಿತ್ ವಿವರಿಸಿದ್ದಾರೆ.
Related Articles
Advertisement
ಅದರ ವಿಶೇಷವೆಂದರೆ, ಇದುವರೆಗೆ ಅಲ್ಲಿ ಎರಡು ಸಿನಿಮಾಗಳು ಮಾತ್ರ ಚಿತ್ರೀಕರಣಗೊಂಡಿವೆ. ಅದು ಬಿಟ್ಟರೆ, ಸೌತ್ ಇಂಡಿಯಾದಲ್ಲಿ ಅದರಲ್ಲೂ ಕನ್ನಡದ “ದೇವಕಿ’ ಚಿತ್ರ ಮೊದಲನೆಯದು ಎಂಬುದು ಹೆಗ್ಗಳಿಕೆ. ಸೌತ್ ಪಾರ್ಕ್ ಸಿಮೆಟ್ರಿ ನೂರು ವರ್ಷದಷ್ಟು ಹಳೆಯದು. 1970 ರಲ್ಲೇ ಅದನ್ನು ಮುಚ್ಚಲಾಗಿತ್ತು. ಆಗ ಬ್ರಿಟಿಷರ ಆಳ್ವಿಕೆ ಇದ್ದಾಗ, ದೊಡ್ಡ ದೊಡ್ಡ ವ್ಯಕ್ತಿಗಳನ್ನು ಆ ಸ್ಥಳದಲ್ಲಿ ಸಮಾಧಿ ಮಾಡಲಾಗುತ್ತಿತ್ತು. ಕಳೆದ 45 ವರ್ಷಗಳಿಂದಲೂ ಆ ಪಾರ್ಕ್ ಮುಚ್ಚಿದೆ.
ಆ ಸ್ಥಳದಲ್ಲಿ ಸತ್ಯಜಿತ್ ರೇ ಅವರ ಪುತ್ರನ ಸಿನಿಮಾ, ಅಮಿತಾಬಚ್ಚನ್ ಅವರ ಒಂದು ಚಿತ್ರಕ್ಕೆ ಚಿತ್ರೀಕರಣ ಮಾಡಲು ಅವಕಾಶ ಕೊಟ್ಟಿದ್ದು ಬಿಟ್ಟರೆ, ಬೇರೆ ಯಾವ ಸಿನಿಮಾಗೂ ಅವಕಾಶ ಕೊಟ್ಟಿರಲಿಲ್ಲವಂತೆ. ಈಗ ಸೌತ್ ಇಂಡಿಯಾದಲ್ಲಿ ಕನ್ನಡದ “ದೇವಕಿ’ ಮೊದಲ ಚಿತ್ರ ಅಲ್ಲಿ ಚಿತ್ರೀಕರಣ ನಡೆದಿದೆ ಎಂಬುದು ನಿರ್ದೇಶಕ ಲೋಹಿತ್ ಮಾತು. ಎಲ್ಲಾ ಸರಿ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಪಾತ್ರವೇನು?
ಅದಕ್ಕೆ ಉತ್ತರಿಸುವ ನಿರ್ದೇಶಕರು, ಎನ್‌ಜಿಓ ಪಾತ್ರ ನಿರ್ವಹಿಸುತ್ತಿದ್ದು, ಕೆಲ ಸ್ಟುಡೆಂಟ್ಸ್‌ಗೆ ಪಾಠ ಹೇಳಿಕೊಡುವ ಮೇಡಮ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೈಲೈಟ್ ಅಂದರೆ, ಮಳೆಯ ಎಫೆಕ್ಟ್‌ನಲ್ಲಿ ಸುಮಾರು 300 ಕ್ಕೂ ಹೆಚ್ಚು ಜೂನಿಯರ್ ಇಟ್ಟುಕೊಂಡು ಚಿತ್ರೀಕರಿಸಲಾಗಿದೆ. ರಾಮ್‌ಗೊàಪಾಲ್ ವರ್ಮ ಅವರ ಚಿತ್ರವೊಂದರಲ್ಲಿ ಕಸಬ್ ಪಾತ್ರ ನಿರ್ವಹಿಸಿದ್ದ ನಟ ಸಂಜೀವ್ ಜೆಸ್ವಾಲ್ ಅವರು ಪ್ರಿಯಾಂಕ ಉಪೇಂದ್ರ ಅವರ ಕಾಂಬಿನೇಷನ್‌ನಲ್ಲಿ ನಟಿಸುತ್ತಿರುವುದು ಇನ್ನೊಂದು ವಿಶೇಷ.
ಬಿಡುಗಡೆಗೆ ಸಿದ್ಧ: ಸದ್ಯಕ್ಕೆ “ದೇವಕಿ’ ಚಿತ್ರಕ್ಕೆ ಡಿಐ ಕೆಲಸ ನಡೆಸುತ್ತಿದೆ. ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿರುವುದರಿಂದ ಅಲ್ಲೇ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಇನ್ನು, ಸೆನ್ಸಾರ್‌ಗೆ ಇಷ್ಟರಲ್ಲೇ ಕಳುಹಿಸುವ ಯೋಚನೆ ನಿರ್ದೇಶಕರಿಗಿದೆ. “ದೇವಕಿ’ ಕೃಷ್ಣನ ತಾಯಿ ಹೆಸರು. ಕಥೆ ಮತ್ತು ಪಾತ್ರಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತೆ ಎಂಬ ಕಾರಣಕ್ಕೆ “ದೇವಕಿ’ ಎಂದು ನಾಮಕರಣ ಮಾಡಲಾಗಿದೆ. ನಾಯಕಿಯದು ಇಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವ ಪಾತ್ರ.
ತನ್ನ ಮಗಳನ್ನು ಕಳೆದುಕೊಂಡ ತಾಯಿ ಹೇಗೆಲ್ಲಾ ಅವಳನ್ನು ಹುಡುಕಾಡುತ್ತಾಳೆ ಎಂಬುದು ಕಥೆ. ಇಲ್ಲಿ ಎಮೋಷನ್ ಥ್ರಿಲ್ಲರ್ ಕಂಟೆಂಟ್ ಇದೆ. ನೋಡುಗರಿಗೆ ಅದು ಮಕ್ಕಳ ಕಳ್ಳರ ಕೃತ್ಯ ಇರಬಹುದಾ ಎಂದೆನಿಸಿದರೂ, ಅಲ್ಲೊಂದು ತಿರುವು ಇದೆ. ಅದೇ ಸಿನಿಮಾದ ಹೈಲೈಟ್. ಅಮ್ಮ ತನ್ನ ಮಗಳನ್ನು ಹುಡುಕುವುದೇ ಚಿತ್ರದ ಮುಖ್ಯ ಕಥೆ. ಇಲ್ಲಿ ಸಂಬಂಧಗಳ ಮೌಲ್ಯವನ್ನು ತೋರಿಸಲಾಗಿದೆ. ಫ್ಯಾಮಿಲಿ ಎಮೋಷನ್ಸ್ ಮೇಲೆಯೇ ಚಿತ್ರ ಸಾಗುತ್ತದೆ.
ಚಿತ್ರದಲ್ಲಿ ಕಿಶೋರ್ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅವರಿಲ್ಲಿ ಕೊಲ್ಕತ್ತಾ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ. “ಮೊದಲು ಅವರನ್ನು ಅಪ್ರೋಚ್ ಮಾಡಿದಾಗ ಡೇಟ್ ಇಲ್ಲ, ಮಾಡಲು ಆಗಲ್ಲ ಅಂದಿದ್ದರು. ಕೊನೆಗೆ ಒಂದು ತಿಂಗಳ ಕಾಲ ಅವರನ್ನು ಹಿಂಬಾಲಿಸಿ, ಭೇಟಿ ಮಾಡಿ,ಒಮ್ಮೆ ಕಥೆ ಕೇಳಿ, ಇಷ್ಟವಾದರೆ ಮಾತ್ರ ಮಾಡಿ ಅಂತ ಹೇಳಿದಾಗ, ಕಥೆ ಕೇಳಿ, ಡೇಟ್ ಕೊಟ್ಟರು. ಅಷ್ಟೇ ಅಲ್ಲ, ತಮಿಳು ಚಿತ್ರಕ್ಕಾಗಿ ಅವರು ಗಡ್ಡ ಬಿಟ್ಟಿದ್ದರು. ಈ ಚಿತ್ರಕ್ಕೆ ಶೇವ್ ಮಾಡಿಸಿ ಆ ಪಾತ್ರ ಮಾಡಿದ್ದಾರೆ. ಉಳಿದಂತೆ ಚಿತ್ರದಲಿ ಶೇ.40 ರಷ್ಟು ಮಂದಿ ಬೆಂಗಾಲಿ ರಂಗಭೂಮಿ ಕಲಾವಿದರಿದ್ದಾರೆ.
ಚಿತ್ರದಲ್ಲಿ ವೇಣು ಕ್ಯಾಮೆರಾ ಹಿಡಿದರೆ, ನೊಬಿನ್ ಪಾಲ್ ಸಂಗೀತ ನೀಡಿದ್ದಾರೆ. ರವಿಚಂದ್ರ ಅವರ ಸಂಕಲನವಿದೆ. ಕೊಲ್ಕತ್ತಾದಲ್ಲೇ ಸೌಂಡ್ ಎಫೆಕ್ಟ್ ನಡೆಯುತ್ತಿದೆ. ರವಿವರ್ಮ ಅವರಿಲ್ಲಿ ಕೊಲ್ಕತ್ತಾ ಸಿಟಿ ಮಧ್ಯೆಯೇ ಒಂದು ಭರ್ಜರಿ ಚೇಸ್ ಸೀನ್ ಕಂಪೋಸ್ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಕೊಲ್ಕತ್ತಾದಲ್ಲೇ ನಡೆದಿರುವುದರಿಂದ ಬೆಂಗಾಲಿ, ಇಂಗ್ಲೀಷ್, ಹಿಂದಿ ಭಾಷೆಯೂ ಕೇಳಲು ಸಿಗುತ್ತೆ.
ನಾವು ನಮ್ಮೂರು ಬಿಟ್ಟು, ಬೇರೆ ರಾಜ್ಯಕ್ಕೆ ಹೋದಾಗ, ಅಲ್ಲಿ ಕೇಳುವ ಮಾತುಗಳಂತೆಯೇ ಇಲ್ಲೂ ಕೇಳುತ್ತೆ. ಇನ್ನು ಸಿನಿಮಾಟಿಕ್ ಶಾಟ್ ಬಳಕೆ ಮಾಡಿಲ್ಲ. ಕಣ್ಣ ಮುಂದೆ ನಡೆಯುವ ಸಂಗತಿಗಳಂತೆಯೇ ಚಿತ್ರೀಕರಿಸಲಾಗಿದೆ’ ಎನ್ನುವುದು ಲೋಹಿತ್ ಮಾತು. ರವೀಶ್ ಮತ್ತು ಅಕ್ಷಯ್ ನಿರ್ಮಾಣ ಮಾಡಿದ್ದು, ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಗುರುಪ್ರಸಾದ್ ಅವರು ಸಂಭಾಷಣೆ ಬರೆದಿದ್ದಾರೆ.