Advertisement

“ಸೂಜಿದಾರ’ಮತ್ತು “ಪಡ್ಡೆಹುಲಿ’ಗೆ ಸೆನ್ಸಾರ್‌ ಅಸ್ತು

05:42 AM Mar 16, 2019 | Team Udayavani |

ತೆರೆಗೆ ಬರಲು ತೆರೆಮರೆಯಲ್ಲೇ ತಯಾರಿ ನಡೆಸುತ್ತಿರುವ “ಸೂಜಿದಾರ’ ಮತ್ತು “ಪಡ್ಡೆಹುಲಿ’ ಚಿತ್ರಗಳಿಗೆ ಸೆನ್ಸಾರ್‌ನಿಂದ ಬಿಡುಗಡೆಗೆ ಅನುಮತಿ ಸಿಕ್ಕಿದೆ. ಇತ್ತೀಚೆಗೆ ಈ ಚಿತ್ರಗಳನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ “ಸೂಜಿದಾರ’ ಮತ್ತು “ಪಡ್ಡೆಹುಲಿ’ ಎರಡೂ ಚಿತ್ರಗಳಿಗೂ ಯಾವುದೇ ಕಟ್ಸ್‌ ಇಲ್ಲದೆ “ಯು/ಎ’ ಸರ್ಟಿಫಿಕೇಟ್‌ ನೀಡಿದೆ. 

Advertisement

“ಪಡ್ಡೆಹುಲಿ’ಗೆ ಚಿತ್ರದಲ್ಲಿ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ನಿಶ್ವಿ‌ಕಾ ನಾಯ್ಡು ನಾಯಕಿಯಾಗಿ ಜೊತೆಯಾಗಿದ್ದಾರೆ. ಉಳಿದಂತೆ ರವಿಚಂದ್ರನ್‌, ಸುಧಾರಾಣಿ, ವಿಶೇಷ ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ ನಟಿಸಿದ್ದಾರೆ. ಹಳ್ಳಿ ಹುಡುಗನೊಬ್ಬ ಹೇಗೆ ರಾಕ್‌ಸ್ಟಾರ್‌ ಆಗುತ್ತಾನೆ ಎಂಬ ಕಥಾಹಂದರವಿರುವ ಈ ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶಿಸಿದ್ದಾರೆ. ರಮೇಶ್‌ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.  

ಇನ್ನು,”ಸೂಜಿದಾರ’ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಹರಿಪ್ರಿಯಾ, ಯಶ್ವಂತ್‌ ಶೆಟ್ಟಿ, ಸುಚೇಂದ್ರ ಪ್ರಸಾದ್‌, ಚೈತ್ರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂದ್ರಕುಮಾರ್‌ ಕಥೆಯನ್ನು ಮೌನೇಶ್‌ ಬಡಿಗೇರ್‌ ನಿರ್ದೇಶಿಸಿದ್ದಾರೆ. ಅಭಿಜಿತ್‌ ಕೋಟೆಕಾರ್‌, ಸುಚೀಂದ್ರನಾಥ ನಾಯಕ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next