Advertisement

ಜನರ ಸಮಸ್ಯೆಗಳಿಗೆ ಸ್ಪಂದನೆ: ಪ್ರಮೋದ್‌

03:45 AM Feb 18, 2017 | Team Udayavani |

ಉಡುಪಿ: ಸರಕಾರದ ಹಲವಾರು ಜನಪರ ಕಾರ್ಯಕ್ರಮಗಳು ಜನರಿಗೆ ತಲುಪಬೇಕು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ 1,596 ಕೋ. ರೂ. ದಾಖಲೆ ಪ್ರಮಾಣದ ಅಭಿವೃದ್ಧಿ ಕಾರ್ಯಗಳ ಪರಾಮರ್ಶೆಗಾಗಿ “ಗ್ರಾಮದೆಡೆ ವಿಶ್ವಾಸದ ನಡೆ’ ವಿಶೇಷ ಪರಿಕಲ್ಪನೆಯ ಕಾರ್ಯಕ್ರಮ ಹಮ್ಮಿಕೊಂಡು ಜನರ ಅಹವಾಲುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲಾಗುತ್ತಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅಜ್ಜರಕಾಡು ಸೈಂಟ್‌ ಸಿಸಿಲೀಸ್‌ ಪ್ರೌಢಶಾಲಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ “33ನೇ ಅಜ್ಜರಕಾಡು ವಾರ್ಡ್‌ ಮಟ್ಟದ ಜನಸಂಪರ್ಕ ಸಭೆ’ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು.

ಉಡುಪಿ ಅಭಿವೃದ್ಧಿಗೆ ಯೋಜನೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡಜನತೆಗಾಗಿ ಹಲವಾರು
ಜನೋಪಯೋಗಿ ಕಾರ್ಯಕ್ರಮ ಗಳನ್ನು ಜಾರಿಗೆ ತಂದಿದ್ದು, ಒಳ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 320 ಕೋ.ರೂ., ನಗರೋತ್ಥಾನ ಕಾರ್ಯಕ್ಕೆ 35 ಕೋ.ರೂ. ಮಂಜೂರು ಮಾಡಲಾಗಿದೆ.

ಉಡುಪಿಯ ಭುಜಂಗ ಪಾರ್ಕ್‌ ಅನ್ನು ಮಾದರಿ ಪಾರ್ಕ್‌ ಆಗಿ ನಿರ್ಮಿಸಲು ಯೋಜನೆ ಕೈಗೆತ್ತಿಕೊಳ್ಳಲಾಗುವುದು. ನಗರಾಭಿವೃದ್ಧಿ ಪ್ರಾಧಿಕಾರದಿಂದ ಭುಜಂಗ ಪಾರ್ಕ್‌ನ ಅಭಿವೃದ್ಧಿಗೆ 5 ಕೋ. ರೂ. ಕಾಯ್ದಿರಿಸಲಾಗಿದೆ. ಉಡುಪಿಯಲ್ಲಿ ಟಾಯ್‌ ಟ್ರೈನ್‌ಗೆ 1 ಕೋ.ರೂ. ಅನುದಾನ ನೀಡಲಾಗುವುದು. ಪ್ರಾಮಾಣಿಕವಾಗಿ ಅತ್ಯಂತ ಶುದ್ಧ ಹಸ್ತದಿಂದ ಕೆಲಸ ನಿರ್ವಹಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. 

ಬ್ಲೋಸಂ ಫೆರ್ನಾಂಡಿಸ್‌, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌,
ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ ಚಂದ್ರ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ
ಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್‌, ರಾಜ್ಯ ಅಲ್ಪಸಂಖ್ಯಾಧಿಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫ‌ೂರ್‌, ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ, ನಗರಸಭೆ ಮಾಜಿ ಅಧ್ಯಕ್ಷ ಚಿತ್ತರಂಜನ್‌ ಹೆಗ್ಡೆ, ನಗರಸಭೆ ಸದಸ್ಯರಾದ ಯಶ್‌ಪಾಲ್‌ ಸುವರ್ಣ, ಗಣೇಶ್‌ ನೇರ್ಗಿ, ರಮೇಶ್‌ ಕಾಂಚನ್‌, ಜನಾರ್ದನ್‌ ಭಂಡಾರ್ಕರ್‌, ಚಂದ್ರಕಾಂತ್‌ ನಾಯಕ್‌, ಹಸನ್‌ ಸಾಹೇಬ್‌, ನಾರಾಯಣ ಕುಂದರ್‌, ನಗರಸಭೆ ಮಾಜಿ ಸದಸ್ಯ ಪ್ರಕಾಶ್‌ ಅಂದ್ರಾದೆ, ಡಿವೈಎಸ್‌ಪಿ ಕುಮಾರ ಸ್ವಾಮಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪನ್ಯಾಸಕ ದಯಾನಂದ ಡಿ. ಕಾರ್ಯಕ್ರಮ ನಿರೂಪಿಸಿದರು.

Advertisement

ಸಮಗ್ರ ಅಭಿವೃದ್ಧಿಗೆ ನೆರವು: ಆಸ್ಕರ್‌
ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವ, ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಅವರು ಮಾತನಾಡಿ, ಶಿಕ್ಷಣ ಮತ್ತು ಸ್ವತ್ಛತೆಗೆ ಹೆಸರಾದ ಉಡುಪಿ ಜಿಲ್ಲೆ ಬಹುತೇಕ ಅಭಿವೃದ್ಧಿ ಕಂಡಿದ್ದಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡಿದೆ. ಜಿಲ್ಲೆಯ ಯುವಜನರು ಎಲ್ಲ ಕ್ಷೇತ್ರದ ವಿವಿಧ ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಲು ಬೇಕಾದ ಮೂಲ ಸೌಕರ್ಯಕ್ಕೆ ಅನುದಾನ ನೀಡಲು ಬದ್ಧನಿದ್ದೇನೆ. ಕಂಪ್ಯೂಟರ್‌ ಲ್ಯಾಬ್‌ ಹೊಂದಿರದ ಜಿಲ್ಲೆಯ ಯಾವುದೇ ಶಾಲೆಗೆ ಕಂಪ್ಯೂಟರ್‌ ಲ್ಯಾಬ್‌ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next