Advertisement

290 ಅಂಕಗಳ ಭರ್ಜರಿ ನೆಗೆತ ಸಾಧಿಸಿದ ಮುಂಬಯಿ ಶೇರು ಪೇಟೆ

05:02 PM May 11, 2018 | udayavani editorial |

ಮುಂಬಯಿ : ಅಮೆರಿಕದ ವಾಲ್‌ ಸ್ಟ್ರೀಟ್‌ ಶೇರುಪೇಟೆಯಲ್ಲಿ ನಿನ್ನೆಯ ಉತ್ತಮ ತೇಜಿಯನ್ನು ಅನುಸರಿಸಿ ಇಂದು ಏಶ್ಯನ್‌ ಮಾರುಕಟ್ಟೆಗಳಲ್ಲಿ ಧನಾತ್ಮಕ ಸನ್ನಿವೇಶ ನೆಲೆಗೊಂಡ ಕಾರಣ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂಚೂಣಿ ಶೇರುಗಳ ಭರ್ಜರಿ ಖರೀದಿ ನಡೆಸಿರುವ ಬಲದಲ್ಲಿ  ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 289.52 ಅಂಕಗಳ ಭರ್ಜರಿ ಜಿಗಿತದೊಂದಿಗೆ 35,535.79 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

Advertisement

ಇದೇ ರೀತಿಯ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ  89.95 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 10,806.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ವಾರದ ನೆಲೆಯಲ್ಲಿ ಸೆನ್ಸೆಕ್‌ ಈ ವಾರಾಂತ್ಯ 620.41 ಅಂಕಗಳನ್ನು (ಶೇ.1.78) ಸಂಪಾದಿಸಿದೆ. ಹಾಗೆಯೇ ನಿಫ್ಟಿ  188.25 ಅಂಕಗಳನ್ನು  (ಶೇ.1.77)  ಸಂಪಾದಿಸಿದೆ. 

ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,805 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,123 ಶೇರುಗಳು ಮುನ್ನಡೆ ಸಾಧಿಸಿದವು; 1,542 ಶೇರುಗಳು ಹಿನ್ನಡೆಗೆ ಗುರಿಯಾದವು; 140 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next