ನವದೆಹಲಿ: ವಿದೇಶಿ ಪೊರ್ಟ್ ಫೋಲಿಯೋ ಹೂಡಿಕೆದಾರರ ಹೆಚ್ಚುವರಿ ಮೇಲ್ತರಿಗೆಯನ್ನ ವಾಪಸ್ ಪಡೆದ ಹಾಗೂ ದೇಶದ ಆರ್ಥಿಕ ಚೇತರಿಕೆಗೆ ವೇಗದ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಘೋಷಿಸಿದ ಹಿನ್ನೆಲೆಯಲ್ಲಿ ಸೋಮವಾರ ಮುಂಬೈ ಶೇರುಪೇಟೆಯ ವಹಿವಾಟಿನಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡಿದೆ.
ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಧ್ಯಾಹ್ನ 795.31ಅಂಕಗಳ ಏರಿಕೆ ಕಂಡಿದ್ದು 37,496.47 ಅಂಕಗಳೊಂದಿಗೆ ವಹಿವಾಟು ನಡೆದಿದೆ. ಅಲ್ಲದೇ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 227.90 ಅಂಕಗಳ ಏರಿಕೆಯೊಂದಿಗೆ 11,057.25 ಅಂಕಗಳೊಂದಿಗೆ ವಹಿವಾಟು ಮುಂದುವರಿದಿದೆ.
ಸೆನ್ಸೆಕ್ಸ್ ಸೂಚ್ಯಂಕ ಮತ್ತು ನಿಫ್ಟಿ ಕಳೆದ ಡಿಸೆಂಬರ್ ಬಳಿಕ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ ಎಂದು ಐಡಿಬಿಐ ರಿಸರ್ಚ್ ಮುಖ್ಯಸ್ಥ ಪ್ರಭಾಕಟರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಹಲವು ಕಂಪನಿ ಶೇರುಗಳು ಭಾರೀ ಏರಿಕೆ ಕಂಡಿದ್ದು, ಪಿಎಸ್ ಯು ಬಿ ಇಂಡೆಕ್ಸ್ ನಿಫ್ಟಿ ಶೇ.3.3ರಷ್ಟು ಏರಿಕೆಯಾಗಿದೆ.
ಇಂದಿನ ಶೇರುಮಾರುಕಟ್ಟೆಯ ವಹಿವಾಟಿನಲ್ಲಿ ಟಾಪ್ ಗೇಯ್ನ್ ನರ್ಸ್:
ಯೆಸ್ ಬ್ಯಾಂಕ್, ಎಚ್ ಡಿಎಫ್ ಸಿ, ಬಜಾಜ್ ಫೈನಾನ್ಸ್, ಎ ಅಂಡ್ ಟಿ, ಐಸಿಐಸಿಐ ಬ್ಯಾಂಕ್ ಹಾಗೂ ಎಸ್ ಬಿಐ ಬ್ಯಾಂಕ್ ಶೇರುಗಳು ಶೇ.6.33ರಷ್ಟು ಏರಿಕೆ ಕಂಡಿದೆ.