ಮುಂಬಯಿ : ಮಧ್ಯಾಹ್ನದ ಬಳಿಕ ಕಂಡು ಬಂದ ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 100.53 ಅಂಕಗಳ ನಷ್ಟದೊಂದಿಗೆ 38,132.88 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 38.20 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,445.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಎನ್‌ಟಿಪಿಸಿ ಅತೀ ದೊಡ್ಡ ನಷ್ಟಕ್ಕೆ ಗುರಿಯಾಗಿ (ಶೇ.2.25) ಟಾಪ್ ಲೂಸರ್ ಎನಿಸಿಕೊಂಡಿತು. ಇದನ್ನು ಅನುಸರಿಸಿ ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಭಾರ್ತಿ ಏರ್ ಟೆಲ್, ಪವರ್ ಗ್ರಿಡ್, ಎಚ್ ಡಿ ಎಫ್ ಸಿ, ರಿಲಯನ್ಸ್, ಕೋಲ್ ಇಂಡಿಯಾ, ಮತ್ತು ಮಹೀಂದ್ರ ಶೇರುಗಳು ಶೇ.1.85ರ ನಷ್ಟಕ್ಕೆ ಗುರಿಯಾದವು.
ಹಾಗಿದ್ದರೂ ಟಾಪ್ ಗೇನರ್ ಆಗಿ ಮೂಡಿ ಬಂದ ಎಸ್ ಬ್ಯಾಂಕ್ ಶೇರು ಶೇ.5.62ರ ನೆಗೆತವನ್ನು ದಾಖಲಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,901 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,203 ಶೇರುಗಳು ಮುನ್ನಡೆ ಸಾಧಿಸಿದವು; 1,549 ಶೇರುಗಳು ಹಿನ್ನಡೆಗೆ ಗುರಿಯಾದವು; 149 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.