ಮುಂಬಯಿ: ವಿದೇಶಿ ಬಂಡವಾಳದ ಹೊರಹರಿವು ಹಾಗೂ ಜಾಗತಿಕ ಷೇರು ಮಾರುಕಟ್ಟೆಗಳ ದುರ್ಬಲ ವಹಿವಾಟಿನ ಪರಿಣಾಮ ಗುರುವಾರ(ಮಾರ್ಚ್ 25) ಬಾಂಬೆ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಮತ್ತೆ 400 ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಯಾಸ್ ನಿಧನ
ಹೂಡಿಕೆದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿಸದ ಪರಿಣಾಮ ರಿಲಯನ್ಸ್ ಇಂಡಸ್ಟ್ರೀಸ್ ಹೆಚ್ಚು ನಷ್ಟ ಅನುಭವಿಸಿದ್ದು, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಬೇಡಿಕೆ ಕಳೆದುಕೊಂಡಿದೆ.
ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 404.94 ಅಂಕ ಇಳಿಕೆಯಾಗಿದ್ದು, 48,775.37 ಅಂಕಗಳ ವಹಿವಾಟು ನಡೆಸಿದೆ. ಎನ್ ಎಸ್ ಇ ನಿಫ್ಟಿ ಕೂಡಾ 113.50 ಅಂಕ ಇಳಿಕೆಯಾಗಿದ್ದು, 14,435ಕ್ಕೆ ಕುಸಿದಿದೆ.
ಷೇರು ಸೂಚ್ಯಂಕ ಕುಸಿತದಿಂದ ಇಂಡಸ್ ಇಂಡ್ ಬ್ಯಾಂಕ್ ಷೇರು ಹೆಚ್ಚು ನಷ್ಟ ಅನುಭವಿಸಿದ್ದು, ಜತೆಗೆ ಮಾರುತಿ, ಎಸ್ ಬಿಐ, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.
ಮತ್ತೊಂದೆಡೆ ಒಎನ್ ಜಿಸಿ, ಟೈಟಾನ್, ಎಲ್ ಆ್ಯಂಡ್ ಟಿ ಮತ್ತು ಡಾ.ರೆಡ್ಡೀಸ್ ಷೇರುಗಳು ಲಾಭ ಗಳಿಸಿವೆ. ಬುಧವಾರ(ಮಾರ್ಚ್ 24) ಬಾಂಬೆ ಷೇರುಪೇಟೆ ಸೂಚ್ಯಂಕ 871 ಅಂಕ ಇಳಿಕೆಯಾಗಿದ್ದು, ದಿನದ ಮುಕ್ತಾಯಕ್ಕೆ 49,180.31ಕ್ಕೆ ವಹಿವಾಟು ಕೊನೆಗೊಂಡಿತ್ತು.