ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 100 ಅಂಕಗಳ ಕುಸಿತವನ್ನು ಅನುಭವಿಸಿತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಂಡ ಕಾರಣ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ನಿಸ್ತೇಜತೆ ಕಂಡು ಬಂದಿತ್ತು. ಇದನ್ನು ಅನುಸರಿಸಿದ ಮಂಬಯಿ ಶೇರು ಪೇಟೆಯಲ್ಲಿ ಕೂಡ ನಿರುತ್ಸಾಹ ಕಂಡು ಬಂತು.
ಹಾಗಿದ್ದರೂ ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 104.63 ಅಂಕಗಳ ಮುನ್ನಡೆಯನ್ನು ಕಂಡು 39,136.18 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 22.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಭಾರ್ತಿ ಇನ್‌ಫ್ರಾಟೆಲ್, ಇಂಡಿಯಾಬುಲ್ಸ್ ಹೌಸಿಂಗ್, ಬಜಾಜ್ ಫಿನಾನ್ಸ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಟಾಪ್ ಲೂಸರ್ ಗಳಾದ ಟಾಟಾ ಮೋಟರ್, ಐಸಿಐಸಿಐ ಬ್ಯಾ,ಕ್, ಎನ್‌ಟಿಪಿಸಿ, ಇನ್‌ಫೋಸಿಸ್ ಮತ್ತು ಟಿಸಿಎಸ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 9 ಪೈಸೆಗಳ ಏರಿಕೆಯನ್ನು ಕಂಡು 69.47 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ರೆಂಟ್ ಕಚ್ಚಾ ತೈಲ ಬೆಲೆ ಇಂದು ಶೇ.0.29ರ ಕುಸಿತವನ್ನು ಕಂಡು ಬ್ಯಾರಲ್‌ಗೆ 71.97 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.