Advertisement

ಚಿನಿವಾರ ಪೇಟೇಲಿ ಗೂಳಿ ಓಟ! ದಾಖಲೆ ನಿರ್ಮಿಸಿದ ಸೆನ್ಸೆಕ್ಸ್

04:23 PM Apr 26, 2017 | Sharanya Alva |

ಮುಂಬೈ: ಜಾಗತಿಕ ಮಟ್ಟದ ವಹಿವಾಟು ಮತ್ತು ಹೆಚ್ಚಿನ ಹೂಡಿಕೆಯ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ (ಎನ್ಎಸ್ಇ) ಸಂವೇದಿ ಸೂಚ್ಯಂಕ ನಿಫ್ಟಿ 9,350.15 ಅಂಕಗಳ ಏರಿಕೆಯೊಂದಿಗೆ ದಾಖಲೆ ಬರೆದಿದ್ದು, ಮುಂಬೈ ಶೇರು ವಿನಿಮಯ(ಬಿಎಸ್ಇ) ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ 30146.54 ಅಂಕಗಳ ಸನಿಹಕ್ಕೆ ತಲುಪಿ ಹೊಸ  ಇತಿಹಾಸ ನಿರ್ಮಿಸಿದೆ.

Advertisement

ಸುಮಾರು 20 ತಿಂಗಳ ಬಳಿಕ ಡಾಲರ್ ಎದುರು ರೂಪಾಯಿ ಚೇತರಿಕೆ(63.93) ಕಂಡಿದೆ. ಭಾರತೀಯ ಶೇರು ಮಾರುಕಟ್ಟೆ ಈ ವರ್ಷ ಹೆಚ್ಚಾಗಿ ಕಣ್ಣೀರು ಸುರಿಸುವಂತಾಗಿತ್ತು. ಆದರೆ ಬುಧವಾರ ಆರಂಭಿಕ ವಹಿವಾಟಿನೊಂದಿಗೆ ಜಾಗತಿಕವಾಗಿ ಶೇರು ಮಾರುಕಟ್ಟೆ ತುಂಬಾ ಉತ್ತಮ ವಹಿವಾಟು ನಡೆಸಿ ದಾಖಲೆ ಬರೆದಿದೆ.

ನಿಫ್ಟಿ 45.25 ಅಂಕಗಳ ಏರಿಕೆಯೊಂದಿಗೆ 9,351.85 ಸೂಚ್ಯಂಕದೊಂದಿಗೆ ದಿನದ ವಹಿವಾಟು ಮುಕ್ತಾಯಗೊಂಡಿದ್ದರೆ, 190.11ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ 30,133.35 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶ ಶೇರು ಮಾರುಕಟ್ಟೆ ವಹಿವಾಟಿನ ಮೇಲೆ ಪ್ರಭಾವ ಬೀರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next