ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 15 ಅಂಕಗಳ ನಷ್ಟಕ್ಕೆ ಗುರಿಯಾಗಿ ಎಚ್ಚರಿಕೆಯ ನಡೆ ತೋರಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ದೌರ್ಬಲ್ಯ, ಆರ್‌ಬಿಐ ಇನ್ನೆರಡು ದಿನಗಳಲ್ಲಿ ಪ್ರಕಟಿಸಲಿರುವ ಹಣಕಾಸು ನೀತಿ ಬಗೆಗಿನ ಕಾತರ ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯಲ್ಲಿ ವಿಶೇಷ ಉತ್ಸಾಹ ಕಂಡು ಬರಲಿಲ್ಲ. ನಿನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ಕಂಡಿದ್ದವು.
ಇಂದು ಮಂಗಳವಾರ ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 110.84 ಅಂಕಗಳ ನಷ್ಟದೊಂದಿಗೆ 40,156.78 ಅಂಕಗಳ ಮಟ್ಟದಲ್ಲೂ, ನಿಫ್ಟಿ 40.10 ಅಂಕಗಳ ನಷ್ಟದೊಂದಿಗೆ 12,048.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಟಾಪ್ ಲೂಸರ್‌ಗಳಾದ ಎಚ್ ಸಿ ಎಲ್ ಟೆಕ್, ಟಿಸಿಎಸ್, ಹೀರೋ ಮೋಟೋ ಕಾರ್ಪ್, ಏಶ್ಯನ್ ಪೇಂಟ್, ಇನ್‌ಫೋಸಿಸ್, ಬಜಾಜ್ ಆಟೋ, ಎಚ್ ಯು ಎಲ್ ಮತ್ತು ಮಾರುತಿ ಶೇರುಗಳು ಶೇ.2ರ ನಷ್ಟಕ್ಕೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು 26 ಪೈಸೆಗಳ ಏರಿಕೆಯನ್ನು ಕಂಡು 69.00 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದು ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಶೇ.0.31ರ ಇಳಿಕೆಯನ್ನು ಕಂಡು ಬ್ಯಾರಲ್ ಗೆ 61.09 ಡಾಲರ್ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.