Advertisement

ಮತ್ತೆ 39,000 ಮಟ್ಟ ಕಂಡು ಹಿಂದೆ ಸರಿದ ಮುಂಬಯಿ ಶೇರು: 57 ಅಂಕ ಏರಿಕೆ

09:02 AM Apr 03, 2019 | Sathish malya |

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 57.61 ಅಂಕಗಳ ಏರಿಕೆಯನ್ನು ದಾಖಲಿಸಿ 38,929.48 ಅಂಕಗಳ ಮಟ್ಟಕ್ಕೆ ಏರಿತು.

Advertisement

ಸೆನ್ಸೆಕ್ಸ್‌ ಇಂದು 39,000 ಅಂಕಗಳ ಗಡಿ ದಾಟಿ ಬಳಿಕ ಅಲ್ಲಿಂದ ಹಿಂದೆ ಸರಿಯಿತು. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಧನಾತ್ಮಕತೆ, ವಿದೇಶಿ ಬಂಡವಾಳದ ನಿರಂತರ ಒಳ ಹರಿವು ಇವೇ ಮೊದಲಾದ ಕಾರಣಗಳಿಗೆ ಮುಂಬಯಿ ಶೇರು ಪೇಟೆಯಲ್ಲಿ ಈಚಿನ ದಿನಗಳಲ್ಲಿ ತೇಜಿ ಕಂಡು ಬರುತ್ತಿದೆ.

ಹಾಗಿದ್ದರೂ ಬೆಳಗ್ಗೆ 10.40ರ ಸುಮಾರಿಗೆ ಸೆನ್ಸೆಕ್ಸ್‌ 6.23 ಅಂಕಗಳ ನಷ್ಟದೊಂದಿಗೆ 38,865.64 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.20 ಅಂಕಗಳ ನಷ್ಟದೊಂದಿಗೆ 11,664.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.

ಟಾಟಾ ಮೋಟರ್‌, ಎಸ್‌ಬಿಐ, ಈಶರ್‌ ಮೋಟರ್‌, ರಿಲಯನ್ಸ್‌, ಮಾರುತಿ ಸುಜುಕಿ ಶೇರುಗಳು ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 22 ಪೈಸೆಗಳ ಕುಸಿತವನ್ನು ಕಂಡು 69.36 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next