ಮುಂಬಯಿ : ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಮೂರೇ ದಿನಗಳು ಬಾಕಿ ಇದ್ದು ಬಹುತೇಕ ಅದರೊಂದಿಗೆ ಕಂಪೆನಿಗಳ ವಾರ್ಷಿಕ ಫಲಿತಾಂಶಗಳು ಹೊರಬೀಳಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆ ನಡೆ ತೋರಿರುವ ಕಾರಣ ಮುಂಬಯಿ ಶೇರು ಪೇಟೆ ಇಂದು ಹಿನ್ನಡೆಗೆ ಗುರಿಯಾಯಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 161.70 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 38,700.53 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರುಪೇಟೆಯ ನಿಫ್ಟಿ ಸೂಚ್ಯಂಕ 61.45 ಅಂಕಗಳ ನಷ್ಟದೊಂದಿಗೆ 11,604.50 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್ ಶೇರುಗಳು ಶೇ.2.66 ರ ನಷ್ಟಕ್ಕೆ ಗುರಿಯಾದರೆ ಬಜಾಜ್ ಫಿನಾನ್ಸ್, ವೇದಾಂತ, ಟಾಟಾ ಮೋಟರ್, ರಿಲಯನ್ಸ್, ಎಸ್‌ಬಿಐ ಶೇರುಗಳು ಶೇ. 2.57ರ ಕುಸಿತಕ್ಕೆ ಗುರಿಯಾದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,762 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ 1,067 ಪೈಕಿ ಶೇರುಗಳು ಮುನ್ನಡೆ ಸಾಧಿಸಿದವು; 1,506 ಶೇರುಗಳು ಹಿನ್ನಡೆಗೆ ಗುರಿಯಾದವು; 189 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.