ಮುಂಬಯಿ : ಭಾರತ – ಪಾಕ್ ಗಡಿಯಲ್ಲಿ ಯುದ್ಧದ ಕಾರ್ಮೋಡಗಳು ಕವಿದಿರುವ ಭೀತಿಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 63.61 ಅಂಕಗಳ ನಷ್ಟದೊಂದಿಗೆ 30,301.64 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 16.40 ಅಂಕಗಳ ನಷ್ಟದೊಂದಿಗೆ 9,369.75 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ಕೇವಲ 697 ಶೇರುಗಳು ಮಾತ್ರವೇ ಮುನ್ನಡೆ ಸಾಧಿಸಿದವು. 2,022 ಶೇರುಗಳು ಹಿನ್ನಡೆಗೆ ಗುರಿಯಾದವು; 151 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಟಾಪ್ ಗೇನರ್‌ಗಳ ಪೈಕಿ ಇಂದು ಟಾಟಾ ಮೋಟರ್ ಶೇರು ಘನವಾಗಿ ವಿಜೃಂಭಿಸಿತು. ಟಾಟಾ ಮೋಟರ್ ಡಿವಿಆರ್ ಮತ್ತು ಗೇಲ್ ಅನಂತರದ ಸ್ಥಾನವನ್ನು ಪಡೆದವು.
ಬಿಎಚ್‌ಇಎಲ್, ಲಾರ್ಸನ್, ಬ್ಯಾಂಕ್ ಆಫ್ ಬರೋಡ ಮತ್ತು ಭಾರ್ತಿ ಇನ್‌ಫ್ರಾಟೆಲ್ ಶೇರುಗಳು ತೀವ್ರ ನಷ್ಟಕ್ಕೆ ಗುರಿಯಾದವು.
ನಾಳೆ ಗುರುವಾರ, ತಿಂಗಳ ವಹಿವಾಟು ಚುಕ್ತಾ ದಿನವಾಗಿರುವುದರಿಂದಲೂ ಮುಂಬಯಿ ಶೇರು ಪೇಟೆ ಹಿನ್ನಡೆಗೆ ಗುರಿಯಾಯಿತು.