Advertisement

ಮುಂಬೈ ಷೇರುಪೇಟೆ; ಕುಸಿತ ಕಂಡು ದಾಖಲೆಯ ಏರಿಕೆಯೊಂದಿಗೆ ವಹಿವಾಟು ಅಂತ್ಯ

06:10 PM Jan 12, 2021 | Team Udayavani |

ಮುಂಬೈ: ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಮಂಗಳವಾರ(ಜನವರಿ 12, 2021) 248 ಅಂಕಗಳಷ್ಟು ಏರಿಕೆಯೊಂದಿಗೆ ದಾಖಲೆಯ 49,569 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ. ಇಂದು ಬೆಳಗ್ಗೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ನೂರು ಅಂಕ ಕುಸಿತ ಕಂಡಿತ್ತು.

Advertisement

ವಿದೇಶಿ ಬಂಡವಾಳದ ಒಳಹರಿವು ಹಾಗೂ ಜಾಗತಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಭರ್ಜರಿ ಷೇರು ಖರೀದಿ, ಮಾರಾಟದ ವಹಿವಾಟು ನಡೆದ ಪರಿಣಾಮ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ (ಬಿಎಸ್ ಇ) 247.79 ಅಂಕಗಳಷ್ಟು ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 49,569.14 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದೆ.

ಎನ್ ಎಸ್ ಇ ನಿಫ್ಟಿ ಕೂಡಾ 78.70 ಅಂಕಗಳ ಏರಿಕೆಯೊಂದಿಗೆ ದಾಖಲೆಯ 14,563.45 ಅಂಕಗಳ ಗಡಿ ತಲುಪಿದೆ. ಇದು ನಿಫ್ಟಿಯ ಸಾರ್ವಕಾಲಿಕ ದಾಖಲೆಯಾಗಿದೆ. ಎಸ್ ಬಿಐ, ಭಾರ್ತಿ ಏರ್ ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಎಚ್ ಡಿಎಫ್ ಸಿ ಬ್ಯಾಂಕ್, ಐಟಿಸಿ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಎನ್ ಟಿಪಿಸಿ ಷೇರುಗಳು ಲಾಭ ಗಳಿಸಿವೆ. ಏಷ್ಯನ್ ಪೇಯಿಂಟ್ಸ್, ಎಚ್ ಯುಎಲ್, ನೆಸ್ಲೆ ಇಂಡಿಯಾ, ಟೈಟಾನ್ ಮತ್ತು ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next