Advertisement

ಐದು ದಿನಗಳ ನಿರಂತರ ಹಿನ್ನಡೆಗೆ ಬ್ರೇಕ್‌: ಸೆನ್ಸೆಕ್ಸ್‌ 35 ಅಂಕ ಏರಿಕೆ

04:56 PM May 22, 2018 | |

ಮುಂಬಯಿ : ಕಳೆದ ಐದು ದಿನಗಳ ನಿರಂತರ ಸೋಲಿನ ನಡೆಗೆ ಕೊನೆಗೂ ಬ್ರೇಕ್‌ ಹಾಕುವಲ್ಲಿ ಸಫ‌ಲವಾದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟಿನಲ್ಲಿ 35 ಅಂಕಗಳ ಏರಿಕೆಯನ್ನು ದಾಖಲಿಸಿ 34,651.24 ಅಂಕಗಳ ಮಟ್ಟವನ್ನು ತಲುಪಿತು.

Advertisement

ಅಮೆರಿಕ – ಚೀನ ವಾಣಿಜ್ಯ ಉದ್ವಿಗ್ನತೆ ಶಮನಗೊಂಡ ಹಿನ್ನೆಲೆಯಲ್ಲಿ ವಾಲ್‌ ಸ್ಟ್ರೀಟ್‌ ನಿನ್ನೆ ಉತ್ತಮ ಏರಿಕೆಯನ್ನು ದಾಖಲಿಸಿತ್ತು. ಅದನ್ನು ಅನುಸರಿಸಿ ಇಂದು ಏಶ್ಯನ್‌ ಶೇರುಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿತ್ತು. ಹಾಗಿದ್ದರೂ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂದಿತ್ತು. ಕಳೆದ ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 940.58 ಅಂಕಗಳ ನಷ್ಟವನ್ನು ಅನುಭವಿಸಿತ್ತು. 

ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದು 20 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10.536.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. 

ಮುಂಬಯಿ ಶೇರು ಮಾರುಕಟ್ಟೆಯಲ್ಲಿಂದು ಒಟ್ಟು 2,765 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,450 ಶೇರುಗಳು ಮುನ್ನಡೆ ಸಾಧಿಸಿದವು; 1,177 ಶೇರುಗಳು ಹಿನ್ನಡೆಗೆ ಗುರಿಯಾದವು; 138 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next