ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಋಣಾತ್ಮಕ ಸನ್ನಿವೇಶ ಕಂಡು ಬಂದಿರುವುದು ಮತ್ತು ಭಾರತೀಯ ಮಾರುಕಟ್ಟೆಯಿಂದ ವಿದೇಶೀ ಬಂಡವಾಳದ ಭಾರೀ ಹೊರ ಹರಿವು ಸಾಗುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿಲ್ಲಿ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 179.66 ಅಂಕಗಳ ನಷ್ಟದೊಂದಿಗೆ 39,577.15 ಅಂಕಗಳ ನಷ್ಟದೊಂದಿಗೆ 39,577.15 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 53.70 ಅಂಕಗಳ ನಷ್ಟದೊಂದಿಗೆ 11,852.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ವಹಿವಾಟಿನಲ್ಲಿ ಭಾರೀ ನಷ್ಟಕ್ಕೆ ಗುರಿಯಾದ ಎಸ್ ಬ್ಯಾಂಕ್ ಶೇರು ಶೇ.8.73ರ ನಷ್ಟಕ್ಕೆ ಗುರಿಯಾಯಿತು. ಉಳಿದಂತೆ ಇಂಡಸ್ ಇಂಡ್ ಬ್ಯಾಂಕ್, ಸನ್ ಫಾರ್ಮಾ, ವೇದಾಂತ, ಟಾಟಾ ಸ್ಟೀಲ್, ಇನ್‌ಫೋಸಿಸ್, ಹೀರೋ ಮೋಟೋ ಕಾರ್ಪ್, ಬಜಾಜ್ ಆಟೋ ಮತ್ತು ಟಾಟಾ ಮೋಟರ್ ಶೇರುಗಳು ಶೇ.5.75ರ ಕುಸಿತವನ್ನು ಕಂಡವು.
ಡಾಲರ್ ಎದುರು ರೂಪಾಯಿ ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಅಲ್ಪ ಏರಿಕೆಯನ್ನು ಕಂಡು 69.37 ರೂ. ಮಟ್ಟ ತಲುಪಿತ್ತು.
ಬ್ರೆಂಟ್ ಅಂತಾರಾಷ್ಟ್ರೀಯ ಕಚ್ಚಾ ತೈಲ ಇಂದು ಶೇ.0.08 ರ ಇಳಿಕೆಯನ್ನು ಕಂಡು ಬ್ಯಾರಲ್ ಗೆ 59.92 ಡಾಲರ್ ಮಟ್ಟದಲ್ಲಿ ಬಿಕರಿಯಾಗುತ್ತಿತ್ತು.