ಮುಂಬಯಿ : ವಿದೇಶಿ ಬಂಡವಾಳದ ಹೊರ ಹರಿವು ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರುವ ಮಿಶ್ರ ಪ್ರತಿಕ್ರಿಯೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 150ಕ್ಕೂ ಅಧಿಕ ಅಂಕಗಳ ಕುಸಿತಕ್ಕೆ ಗುರಿಯಾಗಿ 39,000 ಅಂಕಗಳ ಮನೋಪ್ರಾಬಲ್ಯದ ಮಟ್ಟದಿಂದ ಕೆಳಕ್ಕೆ ಜಾರಿತು.
ಹಾಗಿದ್ದರೂ ಡಾಲರ್ ಎದುರು ರೂಪಾಯಿ ಬಲವರ್ಧನೆ ಮತ್ತು ಜಾಗತಿಕ ಕಚ್ಚಾತೈಲ ದರಗಳಲ್ಲಿನ ಸ್ಥಿರತೆಯ ಕಾರಣ ಮುಂಬಯಿ ಶೇರು ಪೇಟೆ ದೊಡ್ಡ ಮಟ್ಟದ ಕುಸಿತದಿಂದ ಪಾರಾಯಿತು.
ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ 278.19 ಅಂಕಗಳ ನಷ್ಟಕ್ಕೆ ಗುರಿಯಾಗಿ 38,789.14 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 85.50 ಅಂಕಗಳ ನಷ್ಟದೊಂದಿಗೆ 11,669.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳಾಗಿ ಎಚ್‌ಸಿಎಲ್ ಟೆಕ್, ಐಓಸಿ, ಏಶ್ಯನ್ ಪೇಂಟ್ಸ್, ಝೀ ಎಂಟರ್‌ಟೇನ್‌ಮೆಂಟ್, ಡಾ. ರೆಡ್ಡೀಸ್ ಲ್ಯಾಬ್ ಶೇರುಗಳು ಮೂಡಿ ಬಂದವು; ಟಾಪ್ ಲೂಸರ್‌ಗಳಾದ ಎಸ್ ಬ್ಯಾಂಕ್, ಇಂಡಿಯಾ ಬುಲ್ಸ್ ಹೌಸಿಂಗ್, ಇಂಡಸ್‌ಇಂಡ್ ಬ್ಯಾಂಕ್, ಭಾರ್ತಿ ಇನ್‌ಫ್ರಾಟೆಲ್, ಸನ್ ಫಾರ್ಮಾ ಶೇರು ಗಳು ಹಿನ್ನಡೆಗೆ ಗುರಿಯಾಗಿದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 32 ಪೈಸೆಗಳ ಏರಿಕೆಯನ್ನು ದಾಖಲಿಸಿ 69.70 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.