ಮುಂಬಯಿ : ಅಮೆರಿಕದ ಫಡರಲ್ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಏರಿಸಿದ ಪರಿಣಾಮವಾಗಿ ವಿದೇಶಿ ಬಂಡವಾಳದ ಹೊರ ಹರಿವು ಹೆಚ್ಚುವ ಭೀತಿಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 126 ಅಂಕಗಳ ಪತನವನ್ನು ಕಂಡಿತು.
ಐಟಿ, ಪಿಎಸ್‌ಯು, ಆಯಿಲ್ ಆ್ಯಂಡ್ ಗ್ಯಾಸ್, ಟೆಕ್, ಬ್ಯಾಂಕಿಂಗ್ ಮತ್ತು ರಿಯಲ್ಟಿ ಸೂಚ್ಯಂಕಗಳು ಇಂದು ನೇತ್ಯಾತ್ಮಕ ವಲಯವನ್ನು ತಲುಪಿದವು.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 295.49 ಅಂಕಗಳನ್ನು ಸಂಪಾದಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 11.15ರ ಹೊತ್ತಿಗೆ 182.87 ಅಂಕಗಳ ನಷ್ಟದೊಂದಿಗೆ 35,556.29 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 61.30 ಅಂಕಗಳ ನಷ್ಟದೊಂದಿಗೆ 10,795.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವಿಪ್ರೋ, ಎಕ್ಸಿಸ್ ಬ್ಯಾಂಕ್, ಟಿಸಿಎಸ್, ಎನ್‌ಟಿಪಿಸಿ, ಅದಾನಿ ಪೋರ್ಟ್, ಎಸ್‌ಬಿಐ, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಮುಂತಾಗಿ ಹಲವು ಶೇರುಗಳು ಶೇ.1.08ರ ನಷ್ಟಕ್ಕೆ ಗುರಿಯಾದವು.
ಹಾಗಿದ್ದರೂ ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 8 ಪೈಸೆ ಚೇತರಿಕೆಯನ್ನು ಕಂಡು 67.57 ರೂ. ಮಟ್ಟಕ್ಕೆ ತಲಪಿತು.