Advertisement

ವಾರಾಂತ್ಯಕ್ಕೆ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 568 ಅಂಕ ಜಿಗಿತ,14,507ರ ಗಡಿ ತಲುಪಿದ ನಿಫ್ಟಿ

06:14 PM Mar 26, 2021 | Team Udayavani |

ಮುಂಬಯಿ:ಜಾಗತಿಕ ಆರ್ಥಿಕ ಚೇತರಿಕೆಯ ಆಶಾಭಾವದ ಪರಿಣಾಮ ಮುಂಬಯಿ ಷೇರುಪೇಟೆ ಮೇಲೆ ಬೀರಿದ್ದು, ಕಳೆದ ಎರಡು ತಿಂಗಳಲ್ಲಿ ಹಾವು-ಏಣಿಯಾಟವಾಡುತ್ತಿದ್ದ ವಹಿವಾಟು ಶುಕ್ರವಾರ (ಮಾರ್ಚ್ 26) ಸಂವೇದಿ ಸೂಚ್ಯಂಕ 568 ಅಂಕ ಏರಿಕೆಯಾಗಿ 49,008 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.

Advertisement

ಇದನ್ನೂ ಓದಿ:ನಾಳೆ ರಾಮ್ ಚರಣ್ ಹುಟ್ಟುಹಬ್ಬ : ಅಡ್ವಾನ್ಸ್ ಗಿಫ್ಟ್ ಕೊಟ್ಟ RRR ತಂಡ

ಎನ್ ಎಸ್ ಇ ನಿಫ್ಟಿ ಕೂಡಾ 182 ಅಂಕ ಏರಿಕೆಯಾಗಿ 14,507ರ ಗಡಿ ತಲುಪಿದೆ. ಈ ಬೆಳವಣಿಗೆಯಿಂದ ಬ್ಯಾಂಕ್ ಮತ್ತು ಮೆಟಲ್ ಷೇರುಗಳು ಹೆಚ್ಚಿನ ಲಾಭ ಗಳಿಸುವಂತಾಗಿದೆ. ಕಳೆದ ಎರಡು ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.3ರಷ್ಟು ಕುಸಿತ ಕಂಡಿತ್ತು.

ನಿಫ್ಟಿ50 ಸೂಚ್ಯಂಕ ಏರಿಕೆಯಿಂದ ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್, ಟೈಟಾನ್, ಏಷ್ಯನ್ ಪೇಯಿಂಟ್ಸ್, ಟಾಟಾ ಮೋಟಾರ್ಸ್ ನಿಫ್ಟಿ ಹೆಚ್ಚು ಲಾಭ ಕಂಡಿದ್ದು, ಯುಪಿಎಲ್, ಇಚರ್ ಮೋಟಾರ್ಸ್, ಪವರ್ ಗ್ರಿಡ್, ಐಟಿಸಿ ಮತ್ತು ಹೀರೋ ಮೋಟೊ ನಷ್ಟ ಅನುಭವಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next