Advertisement

ಜಿಡಿಪಿ ಅಂದಾಜು ಇಳಿಸಿದ ಆರ್‌ಬಿಐ : ಮುಂಬಯಿ ಶೇರು 192 ಅಂಕ ನಷ್ಟ

09:38 AM Apr 05, 2019 | Sathish malya |

ಮುಂಬಯಿ : ಮುಂಗಾರು ಅನಿಶ್ಚಿತತೆಯ ನಡುವೆ ಆರ್‌ಬಿಐ 2019-20ರ ಜಿಡಿಪಿ ಬೆಳವಣಿಗೆಯ ಅಂದಾಜನ್ನು ಇಳಿಸಿರುವುದು, ಹಣಕಾಸು ನೀತಿಯಲ್ಲಿನ ತಾಟಸ್ತ್ಯ ಧೋರಣೆಯನ್ನು ಮುಂದುವರಿಸಲು ನಿರ್ಧರಿಸಿರುವುದು ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 192.40 ಅಂಕಗಳ ನಷ್ಟದೊಂದಿಗೆ 38,684.72 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 45.95 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 11,598 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

2019-20ರ ಸಾಲಿನ ಮೊದಲ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಆರ್‌ ಬಿ ಐ ಇಂದು ತನ್ನ ರಿಪೋ ದರವನ್ನು ಶೇ.0.25ರಷ್ಟು ಇಳಿಸಿ ಶೇ.6ಕ್ಕೆ ನಿಗದಿಸಿತು.

ಇಂದಿನ ವಹಿವಾಟಿನಲ್ಲಿ ಟಿಸಿಎಸ್‌ ಶೇರು ಶೇ.3.17ರ ಕುಸಿತವನ್ನು ಕಂಡು ಟಾಪ್‌ ಲೂಸರ್‌ ಎನಿಸಿಕೊಂಡಿತು.

ಇದನ್ನು ಅನುಸರಿಸಿ ಎಚ್‌ಸಿಎಲ್‌ ಟೆಕ್‌, ಎಸ್‌ ಬ್ಯಾಂಕ್‌, ಇಂಡಸ್‌ ಇಂಡ್‌ ಬ್ಯಾಂಕ್‌, ಆರ್‌ಐಎಲ್‌, ಐಸಿಐಸಿಐ ಬ್ಯಾಂಕ್‌, ಇನ್‌ಫೋಸಿಸ್‌, ಟಾಟಾ ಸ್ಟೀಲ್‌, ಕೋಟಕ್‌ ಬ್ಯಾಂಕ್‌ ಮತ್ತು ಎಲ್‌ ಆ್ಯಂಡ್‌ ಟಿ ಶೇರುಗಳು ಶೇ.2.34ರ ನಷ್ಟಕ್ಕೆ ಗುರಿಯಾದವು.

Advertisement

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,699 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,072 ಶೇರುಗಳು ಮುನ್ನಡೆ ಸಾಧಿಸಿದವು; 1,453 ಶೇರುಗಳು ಹಿನ್ನಡೆಗೆ ಗುರಿಯಾದವು; 174 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next