Advertisement

418 ಅಂಕ ಕುಸಿದ ಸೆನ್ಸೆಕ್ಸ್‌

08:44 AM Aug 06, 2019 | Lakshmi GovindaRaj |

ಮುಂಬೈ ಷೇರುಪೇಟೆ ಸೋಮವಾರ ಭಾರಿ ಕುಸಿತ ಕಂಡಿದೆ. ಜಾಗತಿಕ ಮಟ್ಟದಲ್ಲಿ ಕುಸಿತ ಹಾಗೂ ಕಾಶ್ಮೀರದಲ್ಲಿನ ರಾಜಕೀಯ ಅಸ್ಥಿರತೆಯಿಂದಾಗಿ 418 ಅಂಕ ಕುಸಿದ ಬಿಎಸ್‌ಇ ಸೆನ್ಸೆಕ್ಸ್‌ 36,699.84ಕ್ಕೆ ಇಳಿಕೆ ಕಂಡಿದೆ. ದಿನದ ವಹಿವಾಟಿನ ಅವಧಿಯಲ್ಲಿ ಒಟ್ಟು 700 ಅಂಕ ಕುಸಿತ ಕಂಡಿತ್ತಾದರೂ ನಂತರ ಚೇತರಿಸಿಕೊಂಡಿತು. ಸೋಮವಾರ ಸೆನ್ಸೆಕ್ಸ್‌ 36,416.79 ರ ವರೆಗೂ ಇಳಿಕೆಯಾಗಿತ್ತು. ಇದೇ ವೇಳೆ ನಿಫ್ಟಿ ಕೂಡ 134.75 ಅಂಕ ಕುಸಿದು 10,862.60 ಕ್ಕೆ ಇಳಿದಿದೆ.

Advertisement

ರೂಪಾಯಿ ಮೌಲ್ಯ ಕೂಡ 90 ಪೈಸೆ ಇಳಿಕೆ ಕಂಡಿದ್ದು, 70.50 ಕ್ಕೆ ತಲುಪಿದೆ. ಏಷ್ಯಾದ ಇತರ ಷೇರು ಮಾರುಕಟ್ಟೆಗಳೂ ಕುಸಿತ ಕಂಡಿವೆ. ಶಾಂಘೈ ಕಾಂಪೊಸಿಟ್‌ ಇಂಡೆಕ್ಸ್‌, ಹ್ಯಾಂಗ್‌ ಸೆಂಗ್‌, ನಿಕ್ಕಿ ಮತ್ತು ಕೊಸ್ಪಿ ಷೇರು ಮಾರುಕಟ್ಟೆಗಳೂ ಇಳಿಕೆ ಕಂಡಿವೆ. ಅಮೆರಿಕ ಮತ್ತು ಚೀನಾದ ಮಧ್ಯೆ ವ್ಯಾಪಾರ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಏಷ್ಯಾ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು, ಚೀನಾದ ಕರೆನ್ಸಿ ಯುವಾನ್‌ ಕೂಡ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next