Advertisement

ಸೆನ್ಸೆಕ್ಸ್‌ 510 ಅಂಕ ಕುಸಿತ

06:00 AM Mar 17, 2018 | |

ಮುಂಬಯಿ: ಜಾಗತಿಕ ಮತ್ತು ರಾಜಕೀಯ ಕಾರಣಗಳಿಂದಾಗಿ ಷೇರು ಮಾರುಕಟ್ಟೆ ಶುಕ್ರವಾರ ಭಾರಿ ಕುಸಿತ ಕಂಡಿದೆ.ಫೆಬ್ರವರಿ 6 ರ ನಂತರ ಅತಿದೊಡ್ಡ ಇಳಿಕೆಯಾಗಿದ್ದು, ಸೆನ್ಸೆಕ್ಸ್‌ 510 ಅಂಕ ಇಳಿಕೆ ಕಂಡು ದಿನದ ಅಂತ್ಯಕ್ಕೆ 33,176 ತಲುಪಿತು. 

Advertisement

ಒಂದೆಡೆ ಜಾಗತಿಕ ಮಾರುಕಟ್ಟೆ ಒತ್ತಡದಲ್ಲಿದ್ದರೆ, ಭಾರತದಲ್ಲಿ ಎನ್‌ಡಿಎ ತೊರೆಯಲು ಟಿಡಿಪಿ ನಿರ್ಧರಿಸಿದ್ದು ಹಾಗೂ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರಿಂದಾಗಿ ಭಾರ ತೀಯ ಹಾಗೂ ವಿದೇ ಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಿರುವುದು ಕಂಡುಬಂತು.

ಅಮೆರಿಕ ಆಮದು ಸ್ಟೀಲ್‌ ಹಾಗೂ ಅಲ್ಯುಮಿನಿಯಂಗೆ ಬೆಲೆ ನಿಗದಿಪಡಿಸಿದ್ದರಿಂದ ಜಾಗತಿಕ ವ್ಯಾಪಾರ ಯುದ್ಧವೊಂದು ನಡೆಯುವ ಭೀತಿ ಉಂಟಾಗಿದೆ. ಇದರಿಂದ ಏಷ್ಯಾ ದೇಶಗಳ ಮಾರುಕಟ್ಟೆ ಕುಸಿತ ಕಂಡಿದೆ. ಸತತ ಮೂರು ವಾರ ಮಾರುಕಟ್ಟೆ ಇಳಿಕೆಯ ಅಂತ್ಯ ಕಂಡಿದೆ. 

ನಿಫ್ಟಿ ಕೂಡ 10200 ಮಟ್ಟಕ್ಕಿಂತ ಕೆಳಗೆ ಇಳಿಕೆ ಕಂಡಿದ್ದು, 165 ಅಂಕ ಕುಸಿದು 10,195.15ರಲ್ಲಿ ದಿನದ ಅಂತ್ಯವಾಗಿದೆ. ಲೋಹ, ತೈಲ, ನೈಸರ್ಗಿಕ ಅನಿಲ, ವಿದ್ಯುತ್‌, ಸಾರ್ವಜನಿಕ ವಲಯದ ಕಂಪನಿಗಳು, ವಿದ್ಯುತ್‌, ವಾಹನ ಮತ್ತು ಬ್ಯಾಂಕ್‌ ಸ್ಟಾಕ್‌ಗಳು ಕುಸಿತ ಕಂಡಿವೆ. 

Advertisement

Udayavani is now on Telegram. Click here to join our channel and stay updated with the latest news.

Next