ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಕಂಡು ಬಂದ ಧನಾತ್ಮಕ ಸನ್ನಿವೇಶವನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 39,000 ಅಂಕಗಳ ನಿರ್ಣಾಯಕ ಮಟ್ಟವನ್ನು ಕಾಯ್ದುಕೊಂಡಿತ್ತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,700 ಅಂಕಗಳ ಸನಿಹದೆಡೆಗೆ ಸಾಗುತ್ತಿತ್ತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಮೆಟಲ್, ಐಟಿ, ಮತ್ತು ಕ್ಯಾಪಿಟಲ್ಸ್ ಗೂಡ್ಸ್ ರಂಗದ ಶೇರುಗಳು ಉತ್ತಮ ಖರೀದಿಯನ್ನು ಕಂಡವು.
ಹಾಗಿದ್ದರೂ ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್ 4.23 ಅಂಕಗಳ ನಷ್ಟಕ್ಕೆ ಗುರಿಯಾಗಿ 38,858.00 ಅಂಕಗಳ ಮಟ್ಟದಲ್ಲೂ ನಿಫ್ಟಿ 10.60 ಅಂಕಗಳ ನಷ್ಟದೊಂದಿಗೆ 11,655.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಪವರ್ ಗ್ರಿಡ್, ಇಂಡಸ್ ಇಂಡ್ ಬ್ಯಾಂಕ್, ಎಚ್‌ಯುಎಲ್, ಮಹೀಂದ್ರ, ಇಂಡಿಯಾ ಬುಲ್ಸ್ ಹೌಸಿಂಗ್; ಟಾಪ್ ಲೂಸರ್‌ಗಳು : ಅದಾನಿ ಪೋರ್ಟ್, ಬಿಪಿಸಿಎಲ್, ವೇದಾಂತ, ಐಓಸಿ, ಈಶರ್ ಮೋಟರ್.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 37 ಪೈಸೆಗಳ ನಷ್ಟಕ್ಕೆ ಗುರಿಯಾಗಿ 69.60 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.