ಕುದೂರು: ಕೊರೊನಾ ಸೋಂಕಿನ 3 ನೇ ಅಲೆ ಹೆಚ್ಚಾಗುತ್ತಿದ್ದು. ಹಿರಿಯರು ಹಾಗೂ ಕೊರೊನಾ ವಾರಿಯರ್ಸ್‌ಗಳು ಮಾರ್ಗಸೂಚಿ ಪಾಲಿಸುವುದರ ಜತೆಗೆ ಬೂಸ್ಟರ್ ಡೋಸ್ ಲಸಿಕೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಆರೋಗ್ಯಾಧಿಕಾರಿ ಲೋಕೇಶ್ ಮೂರ್ತಿ ತಿಳಿಸಿದರು.
ಕುದೂರಿನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಸೋಂಕಿನ 3 ನೇ ಅಲೆ ಹಿನ್ನೆಲೆ ಹಿರಿಯ ನಾಗರಿಕರಿಗೆ ಮತ್ತು ಕೊರೊನಾ ವಾರಿಯರ್ಗಳಿಗೆ 3ನೇ ಹಂತರ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಮೊದಲನೆ ಅಲೆ ಹಾಗೂ 2 ನೇ ಅಲೆಯ ವೇಳೆ ಸಾಕಷ್ಟು ಸಾವು-ನೋವು ಉಂಟಾಗಿತ್ತು. ಗ್ರಾಪಂ ಮತ್ತು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕೊರೊನಾ ವಾರಿಯರ್ ಸಹಕಾರದಿಂದ ಪ್ರತಿನಿತ್ಯ ಸಭೆ ನಡೆಸಿ ರೋಗಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಸಂಘ-ಸಂಸ್ಥೆಗಳ ಸೋಂಕಿತರಿಗೆ ಹಲವು ರೀತಿಯ ಸೌಲಭ್ಯ ನೀಡಲಾಗಿತ್ತು. ವೈದ್ಯರು, ನರ್ಸ್‌ಗಳು ಶ್ರಮಿಸಿ ಹಲವರ ಪ್ರಾಣ ಉಳಿಸಿದ್ದಾರೆ ಎಂದು ಶ್ಲಾ ಸಿದರು.
ಮಾರ್ಗಸೂಚಿ ಪಾಲಿಸಿ: ಸಮಾಜ ಸೇವಕ ಪದ್ಮನಾಬ್ ಮಾತನಾಡಿ, ಒಮಿಕ್ರಾನ್ ಸೋಂಕು ಸಹ ಹೆಚ್ಚಳ ಹಿನ್ನೆಲೆ ಪ್ರತಿ ಯೊಬ್ಬರು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಈ ಹಿಂದೆ ಕೊರೊ ನಾ ದಿಂದ ಹಲವರನ್ನು ಕಳೆದುಕೊಂಡಿ ದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ. ನಿರ್ಲಕ್ಷ್ಯ ತೋರದೆ ಕೋವಿಡ್ ನಿಯಮ ಪಾಲಿಸಿ, ಸಭೆ- ಸಮಾರಂಭ ಗಳಿಂದ ದೂರವಿದ್ದು ಸೋಂಕು ನಿಯಂತ್ರಿಸಿ ಎಂದರು. ಇದೇ ಸಂದರ್ಭ ದಲ್ಲಿ ಹಿರಿಯ ನಾಗರಿಕರಿಗೆ 3 ನೇ ಹಂತದ ಬೂಸ್ಟರ್ ಡೋಸ್ ನೀಡಲಾಯಿತು. ಸಿಸ್ಟರ್ ರಾಜಮ್ಮ, ಹೋನ್ನರಾಜು, ಸಾಬೀರ್ ಪಾಷ, ಆಶಾ ಕಾರ್ಯಕರ್ತರು ಇತರರು ಇದ್ದರು.