ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳನ್ನು ಜನಸ್ನೇಹಿಯಾ ಗಿಸುವ ನಿಟ್ಟಿನಲ್ಲಿ ಕೋವಿಡ್ ಪೂರ್ವದಲ್ಲಿ ಜಿಲ್ಲಾಸ್ಪತ್ರೆ ಯಲ್ಲಿ ಅನುಷ್ಠಾನ ಗೊಳಿಸಿದ ಆದ್ಯತೆ ಮೇರೆಗೆ ಹಿರಿಯ ನಾಗರಿಕರಿಗೆ ವಿಶೇಷ ವೈದ್ಯ ಕೀಯ ಸೇವೆ ನೀಡುತ್ತಿದ್ದ “ಹಿರಿಯರ ಸ್ನೇಹಿ ಆರೋಗ್ಯ ಕೇಂದ್ರ’ವನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪರಿಣಾಮಕಾರಿಯಾಗಿ ಅಳ ವಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ “ಹಿರಿಯರ ಸ್ನೇಹಿ ಆರೋಗ್ಯ ಕೇಂದ್ರ’ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತೀವ್ರ ಅನಾರೋಗ್ಯ ದಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಮನೆ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವ “ಹೋಮ್ ಕೇರ್’ ಸೇವೆಯನ್ನು ಇದೀಗ ಕಡ್ಡಾಯವಾಗಿ ಅಳವಡಿ ಸಲು ಆದೇಶಿಸಿದೆ.
ವಂಚಿತರಾಗುತ್ತಿದ್ದರು: ಆರೋಗ್ಯ ಇಲಾಖೆ 2018- 19ರಲ್ಲಿ ರಾಜ್ಯ ದಲ್ಲಿ ಹಿರಿಯರ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಕಾರ್ಯಕ್ರಮದಡಿ ಜಿಲ್ಲಾಸ್ಪತ್ರೆಗಳನ್ನು ಹಿರಿಯ ಸ್ನೇಹಿ ಆರೋಗ್ಯ ಸಂಸ್ಥೆಯಾಗಿ ಪರಿವರ್ತಿ ಸಲು ಸರ್ಕಾರ ಆದೇಶಿಸಿತ್ತು. ಈ ವೇಳೆ ರಾಜ್ಯದ ಕೆಲ ಜಿಲ್ಲಾ ಸ್ಪತ್ರೆಗಳಲ್ಲಿ ಮಾತ್ರ ಪೂರ್ಣ ಪ್ರಮಾಣದ ಹಿರಿಯ ಸ್ನೇಹಿ ಆರೋಗ್ಯ ವ್ಯವಸ್ಥೆ ಅಳ ವಡಿಕೆಯಾಗಿತ್ತು. ಇನ್ನು ಕೆಲ ಜಿಲ್ಲಾಸ್ಪತ್ರೆಗಳಲ್ಲಿ ಆಳವಡಿಸಿಕೊಳ್ಳದೆ ಇದ್ದರೂ, ಹಿರಿಯ ಸ್ನೇಹಿ ಸಂಸ್ಥೆ ಎನ್ನುವುದಾಗಿ ವರದಿ ನೀಡುತ್ತಿವೆ. ಇದರಿಂದಾಗಿ ಅನೇಕ ಹಿರಿಯ ನಾಗರಿಕರು ವಿಶೇಷ ಸೇವೆಯಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ 2022ರ ಮಾ.31ರೊಳಗೆ ಎಲ್ಲಾ ಆಸ್ಪತ್ರೆಗಳನ್ನು ಪೂರ್ಣವಾಗಿ ಹಿರಿಯ ಸ್ನೇಹಿ ಯಾಗಿ ಪರಿವರ್ತಿಸಬೇಕು. ಈ ಮೂಲಕ ರಾಜ್ಯ ಮಟ್ಟದ ಅಧಿ ಕಾರಿಗಳ ತಂಡ ಆಸ್ಪತ್ರೆಗಳಿಗೆ ಭೇಟಿ ದೃಢಪಡಿಸಲಿದ್ದಾರೆ.
15 ಜಿಲ್ಲಾಸ್ಪತ್ರೆಯಲ್ಲಿ ಅಳವಡಿಕೆ: ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಅಳವಡಿಸುವಂತೆ ಆದೇಶಿಸಿದ್ದರೂ, ಇದು ವರೆಗೆ ಬೆಂಗಳೂರು, ಉಡುಪಿ ಸೇರಿದಂತೆ ಒಟ್ಟು 15 ಜಿಲ್ಲೆಯಲ್ಲಿ ಮಾತ್ರ ಹಿರಿಯ ಸ್ನೇಹಿ ಆರೋಗ್ಯ ವ್ಯವಸ್ಥೆ ಅಳವಡಿಸಲಾಗಿದೆ. ಉಳಿ ದಂತೆ ಸುಮಾರು 15 ಜಿಲ್ಲೆಗಳಲ್ಲಿ ವಿವಿಧ ಕಾರಣ ಗಳಿಂದ ಈ ವ್ಯವಸ್ಥೆ ಅಳವಡಿಸಿಲ್ಲ. ಏಕೆಂದರೆ ಕೆಲ ಜಿಲ್ಲೆಗಳಲ್ಲಿ ಹಿರಿಯ ನಾಗರಿಕರಿಗೆ ಪ್ರತ್ಯೇಕ ವ್ಯವಸ್ಥೆ ಅಳ ವಡಿಸಲು ಸ್ಥಳಾವಕಾಶವಿಲ್ಲದೇ ಇರುವುದು, ಅಧಿಕ ಸಂಖ್ಯೆಯ ಹೊರರೋಗಿಗಳು ಆಗಮಿಸುತ್ತಿರುವುದೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕಾಯುವ ಸ್ಥಿತಿ ತಪ್ಪಲಿದೆ: ಹಿರಿಯ ಸ್ನೇಹಿ ಆರೋಗ್ಯ ಆಸ್ಪತ್ರೆಯಾಗಿ ಸಲು ಸರ್ಕಾರದ ಮಾರ್ಗಸೂಚಿ ಪಾಲಿಸ ಬೇಕು. ಜಿಲ್ಲಾಸ್ಪತ್ರೆ, ತಾಲೂಕು, ಸಮುದಾಯ, ಪ್ರಾಥ ಮಿಕ, ಉಪಕೇಂದ್ರದಲ್ಲಿ ಒಪಿಡಿಗೆ ಬರುವ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೊಠಡಿ ಕಲ್ಪಿಸಬೇಕು. ಇಲ್ಲವಾ ದರೆ ಆಸ್ಪತ್ರೆಯಲ್ಲಿ “ನಾಗರಿಕರ ಸರತಿ ಸಾಲು’ ಎಂಬ ವಿಶೇಷ ನಾಮಫಲಕ ಅಳವಡಿಸಿ ಅವರಿಗೆ ಚಿಕಿತ್ಸೆ ನೀಡಬೇಕು. ಇದರಿಂದಾಗಿ ಹಿರಿಯ ನಾಗರಿಕರು ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪಲಿದೆ. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಿ ದಾಖಲಾಗುವ ಹಿರಿಯ ನಾಗರಿಕರಿಗಾಗಿ ತಲಾ 10 ಹಾಸಿಗೆ, ಸಮುು ದಾಯ ಆರೋಗ್ಯ ಕೇಂದ್ರ ದಲ್ಲಿ 6 ಹಾಸಿಗೆಯನ್ನು ವಿಶೇಷ ಹಾಸಿಗೆ ಮೀಸಲಿಡ ಬೇಕು. ಕಾಯ್ದಿರಿಸಲಾದ ಹಾಸಿಗೆ ಸಮೀಪದಲ್ಲಿಯೇ ಶೌಚಾಲಯ, ಹಿಡಿದು ಓಡಾಟ ನಡೆಸಲು ಅಗತ್ಯ ವಿರುವ ಅನುಕೂಲ, ವಾಕರ್, ವೀಲ್ ಚೇರ್ ವ್ಯವಸ್ಥೆ ಕಲ್ಪಿಸಬೇಕಿದೆ.
ಮನೆ ಮಟ್ಟದಲ್ಲಿಯೇ ಹಿರಿಯ ಜೀವಗಳಿಗೆ ವೈದ್ಯಕೀಯ ಆರೈಕೆ : ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹಾಸಿಗೆ ಹಿಡಿದಿರುವ, ರೋಗ ಪೀಡಿತರು ಸೇರಿದಂತೆ ಇತರೆ ತೀವ್ರ ತರಹದ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಮನೆ ಮಟ್ಟದಲ್ಲಿಯೇ ಅಗತ್ಯ ವೈದ್ಯಕೀಯ ಆರೈಕೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವೈದ್ಯಾಧಿಕಾರಿಗಳು, ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರು ಅಥವಾ ಎನ್‌ಸಿಡಿ ಘಟಕದ ವೈದ್ಯರು, ಶುಶ್ರೂಷಕರು, ಚಿಕಿತ್ಸಕರು ಹಾಗೂ ಸಮಾಲೋಚಕರು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಿದ್ದಾರೆ.
ಹಿರಿಯ ನಾಗರಿಕರಿಗೆ ಆದ್ಯತೆ ಮೇರೆಗೆ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ “ಹಿರಿಯರ ಸ್ನೇಹಿ ಆರೋಗ್ಯ ಕೇಂದ್ರ’ ಕಾರ್ಯಾಚರಿಸಲಿದೆ. ಈ ಸೇವೆಯನ್ನು ಸಂಪೂರ್ಣವಾಗಿ ಅಳವಡಿಸುವ ಬಗ್ಗೆ ದೃಢೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
–ಡಾ.ರಂಗಸ್ವಾಮಿ ಎಚ್.ವಿ., ಉಪನಿರ್ದೇಶಕರು, ಎನ್‌ಸಿಡಿ ಆರೋಗ್ಯ ಇಲಾಖೆ.
–ತೃಪ್ತಿ ಕುಮ್ರಗೋಡು