Advertisement

ಹಿರಿಯ ಸಾಹಿತಿ ಡಾ.ರಾಗೌ ಅವರಿಗೆ ಸನ್ಮಾನ

12:34 PM Nov 13, 2018 | |

ಮೈಸೂರು: ಹಿರಿಯ ಸಾಹಿತಿ ಡಾ.ರಾಗೌ ಸಾಹಿತ್ಯ, ಸಂಶೋಧನೆ ಮತ್ತು ಕಾವ್ಯ ಕ್ಷೇತ್ರದಲ್ಲಿ ಡಾ.ರಾಗೌ ಖ್ಯಾತನಾಮರಾಗಿದ್ದು, 52 ವರ್ಷಗಳಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್‌ ಹೇಳಿದರು. 

Advertisement

ನಗರದ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಸಂವಹನ ಟ್ರಸ್ಟ್‌ ಏರ್ಪಡಿಸಿದ್ದ  ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಿರಿಯ ಸಾಹಿತಿ ಡಾ.ರಾಗೌ ಅವರಿಗೆ ಸನ್ಮಾನ, ಯುವ ಬರಹಗಾರ ಡಾ.ನಂದೀಶ್‌ ಹಂಚೆ ಅವರಿಗೆ ಸಂವಹನ ಶಿರಿ ಪ್ರಶಸ್ತಿ ಪುರಸ್ಕೃತ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಶೋಧನಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸೃಜನಶೀಲ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಅಂತೆಯೇ ಯುವ ಬರಹಗಾರ ಡಾ.ನಂದೀಶ್‌ ಹಂಚೆ ಸಹ ಬದಲಾದ ಕಾಲಘಟಕ್ಕೆ ಅನುಗುಣವಾಗಿ ತಮ್ಮ ಜ್ಞಾನಮಟ್ಟ ಮತ್ತು ಬರವಣಿಗೆಯನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಕನ್ನಡವನ್ನು ವರ್ತಮಾನಕ್ಕೆ ಕಟ್ಟಿ ಬೆಳೆಸುವ ಶಕ್ತಿ ಅವರಲ್ಲಿದೆ ಎಂದು ಪ್ರಶಂಸಿಸಿದರು. 

ಕಾರ್ಯಕ್ರಮದಲ್ಲಿ ಹೊಸಮಠದ ಚಿದಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪತ್ರಕರ್ತ ರವೀಂದ್ರ ಭಟ್ಟ, ವಿಧಾನ ಪರಿಷತ್‌ ಮಾಜಿ ಸದಸ್ಯ ಹಾಗೂ ಟ್ರಸ್ಟ್‌ ಗೌರವಾಧ್ಯಕ್ಷ ತೋಂಟದಾರ್ಯ, ಸಂವಹನ ಟ್ರಸ್ಟ್‌ ಅಧ್ಯಕ್ಷ ಡಿ.ಎನ್‌.ಲೋಕಪ್ಪ, ಕಾರ್ಯದರ್ಶಿ ಡಿ.ನಾಗೇಂದ್ರಪ್ಪ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next