Advertisement

Mysore: ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಹತ್ಯೆ!

02:05 PM Jun 10, 2024 | |

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹಿರಿಯ‌ ಸ್ವಾಮೀಜಿಯೊಬ್ಬರನ್ನು ಹತ್ಯೆ ಮಾಡಲಾಗಿದ್ದು ಭಕ್ತರು ಬೆಚ್ಚಿಬಿದ್ದಿದ್ದಾರೆ.

Advertisement

ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿಯವರನ್ನು ಮಠದ ಅವರ ಕೊಠಡಿಯಲ್ಲೇ ಮಾರಕಾಸ್ತ್ರಗಳಿಂದ ಚುಚ್ಚಿ ಕೊಲೆ ಮಾಡಲಾಗಿದೆ.

ಸ್ವಾಮೀಜಿ ಅವರ ಭದ್ರತಾ ಸಿಬ್ಬಂದಿ ಸಹಾಯಕನಾಗಿದ್ದ ರವಿ (60) ಎಂಬಾತ ಸ್ವಾಮೀಜಿಯವರನ್ನು ಹತ್ಯೆ ಮಾಡಿದ್ದಾನೆಂದು ಮಠದಲ್ಲಿದ್ದ‌ ಕೆಲವರು ದೂರಿದ್ದಾರೆ.

ಮಠಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಅಲ್ಲಿದ್ದ ಸಿಬ್ಬಂದಿಗಳು ಮತ್ತು ಮಠದಲ್ಲಿದ್ದವರಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕೊಲೆಯಾದ ಸ್ವಾಮೀಜಿ ಅತ್ಯಂತ ಹಿರಿಯರಾಗಿದ್ದು, ಈ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಎಂದು ತಿಳಿದು ಬಂದಿಲ್ಲ. ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕೆಂದು ಮಠದದಲ್ಲಿದ್ದವರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next