Advertisement

ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದ ಮೂರ್ತಿ ವಿಧಿವಶ

10:01 AM Jan 12, 2020 | Mithun PG |

ಬೆಂಗಳೂರು: ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ಸಂಶೋಧಕ ಡಾ. ಎಂ.ಚಿದಾನಂದಮೂರ್ತಿ ಇಂದು ಮುಂಜಾನೆ 3:45 ರ ಸಮಯದಲ್ಲಿ ನಿಧನರಾಗಿದ್ದಾರೆ.

Advertisement

ಇಂದು ಬೆಳಗ್ಗೆ 9 ಗಂಟೆಯ ನಂತರ ವಿಜಯನಗರದ ಆರ್​ಪಿಸಿ ಲೇಔಟ್​ನ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಚಿದಾನಂದಮೂರ್ತಿ 1931 ಮೇ 10ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಹಿರೆಕೊಗಳೂರಿ ನಲ್ಲಿ ಜನಿಸಿದ್ದರು. ಅವರಿಗೆ 88 ವರ್ಷ ವಯಸ್ಸಾಗಿತ್ತು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಸಾಹಿತ್ಯ, ಸಂಶೋಧನೆ ಮತ್ತು ಇತಿಹಾಸ ಕ್ಷೇತ್ರದಲ್ಲಿ  ಸೇವೆ ಸಲ್ಲಿಸಿರುವ ಚಿದಾನಂದಮೂರ್ತಿಯವರಿಗೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಲಭಿಸಿವೆ.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕೆಂದು ಹೋರಾಟ ಮಾಡಿದವರಲ್ಲಿ ಚಿ.ಮೂ ಪ್ರಮುಖರು. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಚಿದಾನಂದಮೂರ್ತಿ ನಿರಂತರ ಹೋರಾಟ ಮಾಡಿದ್ದರು. ಸಂಶೋಧಕರಾಗಿ ಹಲವು ಸಾಧನೆಗಳನ್ನು ಮಾಡಿದ್ದಾರೆ.  ಪ್ರಾಧ್ಯಾಪಕರಾಗಿಯೂ ಚಿಮೂ  ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next