ಬೆಂಗಳೂರು; ರಾಜ್ಯದ ಹಿರಿಯ ರಾಜಕಾರಣಿ ಎ ಕೆ ಸುಬ್ಬಯ್ಯ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ರಾಜ್ಯ ಬಿಜೆಪಿಯ ಪ್ರಥಮ ಅಧ್ಯಕ್ಷರಾಗಿದ್ದ ಎ ಕೆ ಸುಬ್ಬಯ್ಯ ಅವರು ನಂತರ ಬಿಜೆಪಿ ತೊರೆದಿದ್ದರು.
ಕೊಡಗಿನವರಾದ ಅಜ್ಜಿಕುಟ್ಟಿರ ಕರಿಯಪ್ಪ ಸುಬ್ಬಯ್ಯ ತನ್ನ ರಾಜಕೀಯದ ಅರಂಭದ ದಿನಗಳಲ್ಲಿ ಫೈರ್ ಬ್ರ್ಯಾಂಡ್ ರಾಜಕಾರಣಿ ಎಂದು ಹೆಸರಾಗಿದ್ದರು.
ಅಂದಿನ ಕಾಲದಲ್ಲಿ ಎ.ಬಿ. ವಾಜಪೇಯಿ ಅಂದರೆ ಅಖಿಲ ಭಾರತ ವಾಜಪೇಯಿ, ಎ.ಕೆ. ಸುಬ್ಬಯ್ಯ ಅಂದರೆ ಅಖಿಲ ಕರ್ನಾಟಕ ಸುಬ್ಬಯ್ಯ ಅಂತ ಜನಪ್ರಿಯರಾಗಿದ್ದರು.
ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ಆರ್. ಗುಂಡುರಾವ್ ನೇತೃತ್ವದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರವನ್ನು ಬಯಲುಗೆಳೆದಿದ್ದರು. ಅದರಲ್ಲಿ ಸಚಿವರಾಗಿದ್ದ ಸಿ ಎಂ ಇಬ್ರಾಹಿಂ ಅವರ ʼ ರೋಲೆಕ್ಸ್ ಹಗರಣʼ ಪ್ರಮುಖವಾಗಿತ್ತು.