Advertisement

ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಡಿ.ಪಿ. ತ್ರಿಪಾಠಿ ಇನ್ನಿಲ್ಲ

09:55 AM Jan 03, 2020 | Team Udayavani |

ನವದೆಹಲಿ: ಎನ್‌ಸಿಪಿ ಹಿರಿಯ ನಾಯಕ, ಪ್ರಧಾನ ಕಾರ್ಯದರ್ಶಿ ಡಿ.ಪಿ. ತ್ರಿಪಾಠಿ(67) ಗುರುವಾರ ನಿಧನರಾದರು. ಅವರು ದೀರ್ಘ‌ಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ನಿಧನಕ್ಕೆ ಅನೇಕ ನಾಯಕರು ಕಂಬನಿ ಮಿಡಿದಿದ್ದಾರೆ. ಪಕ್ಷದ ಸದಸ್ಯರಿಗೆ ತ್ರಿಪಾಠಿ ಸದಾ ಒಬ್ಬ ಮಾರ್ಗದರ್ಶಿ ಮತ್ತು ಸಲಹೆಗಾರರಾಗಿದ್ದರು. ಎನ್‌ಸಿಪಿ ಸ್ಥಾಪನೆಯಾದಾಗಿನಿಂದ ಈವರೆಗೂ ಅವರು ಅದರ ಪ್ರಮುಖ ಆಧಾರಸ್ತಂಭವಾಗಿದ್ದರು. ಅವರ ನಿಧನ ನೋವು ತಂದಿದೆ ಎಂದು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಟ್ವೀಟ್‌ ಮಾಡಿದ್ದಾರೆ.

Advertisement

ಕಾಂಗ್ರೆಸ್‌ ನಾಯಕ ಮನೀಷ್‌ ತಿವಾರಿ, ಸಿಪಿಎಂನ ಸೀತಾರಾಂ ಯೆಚೂರಿ, ಆರ್‌ಎಲ್‌ಡಿ ನಾಯಕ ಜಯಂತ್‌ ಚೌಧರಿ ಸೇರಿ ಅನೇಕರು ತ್ರಿಪಾಠಿ ಜತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next